ಮುಡಿಪು : ತಡೆಗೋಡೆ ರಚನೆ ಕಾಮಗಾರಿಗೆ ಶಿಲಾನ್ಯಾಸ
ಮುಡಿಪು , ಡಿ.19 : ಸಣ್ಣ ನೀರಾವರಿ ಯೋಜನೆಯಲ್ಲಿ ಸಾವಣಿಗೆ ಜುಮ್ಮಾ ಮಸೀದಿ ಬಳಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಅವರ ಶಿಫಾರಸ್ಸಿನ ಮೇರೆಗೆ ಮಂಜೂರುಗೊಂಡ ಸುಮಾರು 10 ಲಕ್ಷದಲ್ಲಿ ನಿರ್ಮಾಣವಾಗಲಿರುವ ತಡೆಗೋಡೆ ರಚನೆ ಕಾಮಗಾರಿಗೆ ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಟಿ.ಎಸ್.ಅಬ್ದುಲ್ಲಾ ಅವರು ಮಂಗಳವಾರ ಶಿಲಾನ್ಯಾಸವನ್ನು ನೆವೇರಿಸಿದರು.
ಬಳಿಕ ಮಾತನಾಡಿದ ಅವರು ಕಳೆದ ಹಲವಾರು ವರ್ಷಗಳಿಂದ ಸಾವಣಿಗೆ ಜುಮ್ಮಾ ಮಸೀದಿ ಬಳಿ ತಡೆಗೋಡೆ ಇಲ್ಲದೆ ಹಲವಾರು ಸಮಸ್ಯೆಗಳು ಎದುರಾಗಿದ್ದವು. ಇದೀಗ ಈ ಭಾಗದ ಜನರ ಬೇಡಿಕೆಯಂತೆ ತಡೆಗೋಡೆ ರಚನೆ ಕಾಮಗಾರಿಗೆ ಶಿಲಾನ್ಯಾಸ ನಡೆದಿದ್ದು ಆದಷ್ಟು ಶೀಘ್ರದಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿ ಎಂದರು.
ಈ ಸಂದರ್ಭದಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ, ಕೊಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶೌಕತ್ ಆಲಿ, ಯುವ ಕಾಂಗ್ರೆಸ್ ಅಧ್ಯಕ್ಷರಾದ ನಝರ್ ಷಾ ಪಟ್ಟೋರಿ, ಬ್ಲಾಕ್ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಕೋಡಿಜಾಲ್, ಜುಮ್ಮಾ ಮಸೀದಿ ಅಧ್ಯಕ್ಷರಾದ ಟಿ.ಎಸ್.ಅಬೂಬಕ್ಕರ್, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ನಾಸೀರ್ ಅಹ್ಮದ್ ಸಾಮಣಿಗೆ, ಸ್ಥಳೀಯ ಮುಖಂಡರಾದ ಮಹಮ್ಮದ್ ಸಾಮಣಿಗೆ, ಹಮೀದ್ ಸಾಮಣಿಗೆ, ಹನೀಫ್ ಸಾಮಣಿಗೆ, ಸುಲೈಮಾನ್ ಹಾಜಿ, ಇಲ್ಯಾಸ್ ಹಾಜಿ, ಸಿರಾಜ್ ಸಾಮಣಿಗೆ, ಅಬ್ದುಲ್ ಖಾದರ್ ಸಾಮಣಿಗೆ, ಪಂಚಾಯಿತಿ ಸದಸ್ಯ ಚಂದ್ರಹಾಸ, ಪಿ.ಎಚ್.ಹಮೀದ್, ಅನಿಲ್ ಮುಂತಾದವರು ಉಪಸ್ಥಿತರಿದ್ದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.