×
Ad

ಭಟ್ಕಳ: ಟಿಪ್ಪರ್ ಹಾಯ್ದು ವ್ಯಕ್ತಿ ಸ್ಥಳದಲ್ಲೇ ಸಾವು: ಓರ್ವ ಗಂಭೀರ

Update: 2016-12-19 22:04 IST

ಭಟ್ಕಳ, ಡಿ.19 : ಚಲಿಸುತ್ತಿದ್ದ ಬೈಕ್ ನಿಂದ ನಿಯಂತ್ರಣ ತಪ್ಪಿ ಕೆಳಗಡೆ ಬಿದ್ದ ಬೈಕ್ ಹಿಂಬದಿಯ ಸವಾರನ ತಲೆ ಮೇಲೆ ಹಿಂದಿನಿಂದ ಬರುತ್ತಿದ್ದ ಟಿಪ್ಪರ್ ಹಾಯ್ದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸೋಮವಾರ ಸಂಜೆ ರಾ.ಹೆ.66 ರ ರಂಗೀಕಟ್ಟೆ ಎಂಬಲ್ಲಿ ಜರುಗಿದೆ.

ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಇಬ್ರಾಹೀಮ್ ಷರೀಫ್ ಕಾಕಡೆ(75) ಎಂದು ಗುರುತಿಸಲಾಗಿದೆ.

ಬೈಕ್ ಚಲಾಯಿಸುತ್ತಿದ್ದ ಮುಹಮ್ಮದ್ ಫಾರೂಖ್ ಕಾಕಡೆ(68) ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು ,  ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರಕ್ಕೆ ರವಾನಿಸಲಾಗಿದೆ.

ಮೃತ ಇಬ್ರಾಹಿಂ ಕಾಕಡೆ ಇಲ್ಲಿನ ತಂಝೀಮ್ ಪ್ರತಿನಿಧಿಯಾಗಿ ಮದುವೆ ಸಮಾರಂಭಗಳಲ್ಲಿ ಭಾಗವಹಿಸಿ ವಧುವರರಿಗೆ ಶುಭಾ ಕೋರುವ ಕಾಯಕ ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದರು. ತಮ್ಮ ಸ್ವರಚಿತ ಶಾಯರಿಗಳ ಮೂಲಕ ವಧುವರರಿಗೆ ಶುಭಾ ಹಾರೈಸುತ್ತಿದ್ದರು. ಇವರ ನಿಧನದಿಂದಾಗಿ ತಂಝೀಮ್ ಹಾಗೂ ಭಟ್ಕಳದ ನಾಗರಿಕರಿಗೆ ತುಂಬಲಾರದ ನಷ್ಟವಾಗಿದೆ ಎಂದು ತಂಝೀಮ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಖರೂರಿ ತಿಳಿಸಿದ್ದು ,  ಅವರ ಆತ್ಮಕ್ಕೆ ಅಲ್ಲಾಹನು ಶಾಂತಿಯನ್ನು ದಯಪಾಲಿಸಲಿ ಹಾಗೂ ಕುಟುಂಬ ವರ್ಗಕ್ಕೆ ಇವರ ಅಗಲಿಕೆ ಸಹಿಸುವಂತೆ ಅನುಗ್ರಹಿಸಲಿ ಎಂದು ಪ್ರಾರ್ಥಿಸಿದ್ದಾರೆ.

ಪ್ರಕರಣ ನಗರ ಠಾಣೆಯಲ್ಲಿ ದಾಖಲಾಗಿದೆ.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News