ಟರ್ಕಿ: ಗುಂಡೆಸೆತದಲ್ಲಿ ರಶ್ಯ ರಾಯಭಾರಿಗೆ ಗಂಭೀರ ಗಾಯ
ಅಂಕಾರ,ಡಿ.12: ಟರ್ಕಿ ರಾಜಧಾನಿ ಅಂಕಾರದಲ್ಲಿ ಸೋಮವಾರ ಸಂಜೆ ನಡೆದ ಗುಂಡಿನ ದಾಳಿಯೊಂದರಲ್ಲಿ ರಶ್ಯದ ರಾಯಭಾರಿ ಆ್ಯಂಡ್ರೆ ಕಾರ್ಲೊವ್ ಗಂಭೀರ ಗಾಯಗೊಂಡಿದ್ದಾರೆ.
ಛಾಯಾಚಿತ್ರ ಪ್ರದರ್ಶನ ಗ್ಯಾಲರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾರ್ಲೊವ್ ಮೇಲೆ ಗುಂಡೆಸೆತ ನಡೆದಿದೆಯೆಂದು ಟರ್ಕಿಯ ಮಾಧ್ಯಮಸಂಸ್ಥೆಯೊಂದು ವರದಿ ಮಾಡಿದೆ. ಗಂಭೀರ ಗಾಯಗೊಂಡ ಕಾರ್ಲೊವ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗುಂಡಿನ ದಾಳಿಯಲ್ಲಿ ಸ್ಥಳದಲ್ಲಿದ್ದ ಇನ್ನೂ ಹಲವರು ಗಾಯಗೊಂಡಿರುವುದಾಗಿ ತಿಳಿದುಬಂದಿದೆ. ಘಟನೆಯ ಬಳಿಕ ಇಡೀ ಕಟ್ಟಡವನ್ನು ಟರ್ಕಿಯ ಭದ್ರತಾಪಡೆಗಳು ಸುತ್ತುವರಿದಿವೆ.
ಸಿರಿಯದಲ್ಲಿ ರಶ್ಯದ ಸೈನಿಕ ಕಾರ್ಯಾಚರಣೆಯ ವಿರುದ್ಧ ಟರ್ಕಿಯ ವಿವಿಧೆಡೆ ರವಿವಾರ ಪ್ರತಿಭಟನೆಗಳು ನಡೆದಿದ್ದವು.
‘ಟರ್ಕಿ ಜನತೆಯ ದೃಷ್ಟಿಯಲ್ಲಿ ರಶ್ಯ’ ಎಂಬ ಹೆಸರಿನ ಛಾಯಾಚಿತ್ರ ಪ್ರದರ್ಶನದಲ್ಲಿ ಕಾರ್ಲೊವ್ ಪಾಲ್ಗೊಂಡಿದ್ದಾಗ ಅವರ ಮೇಲೆ ಗುಂಡೆಸೆತ ನಡೆದಿದೆಯೆಂದು ರಶ್ಯದ ಟಿವಿಯೊಂದು ವರದಿ ಮಾಡಿದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.