ಕಿನ್ಯ ಮದ್ರಸದಲ್ಲಿ ಮೀಲಾದ್ ಕಾರ್ಯಕ್ರಮ

Update: 2016-12-19 18:00 GMT

ಮಂಗಳೂರು, ಡಿ.19: ಲೋಕಗುರು ಪ್ರವಾದಿಯವರು ಲೋಕಕ್ಕೆ ನೀಡಿದ ಸಂದೇಶದಂತೆ ನಾವು ಜೀವನ ಸಾಗಿಸಬೇಕಾಗಿದೆ. ಅವರನ್ನು ಕಡೆಗಣಿಸಿದರೆ ಜೀವನ ಯಶಸ್ಸಿಯಾಗದು ಎಂದು ರಾಫಿ ಅಹ್ಸನಿ ಕಾಂತಪುರಂ ಹೇಳಿದರು.

ಹುಸೈನಿಯಾ ಇಸ್ಲಾಮಿಕ್ ಸೆಂಟರ್ ಕಿನ್ಯ, ಬುಖಾರಿ ಜುಮಾ ಮಸ್ಜಿದ್ ಮತ್ತು ನೂರುಲ್ ಉಲಮಾ ಮದ್ರಸ ಬದ್ರಿಯಾ ನಗರ ಕಿನ್ಯ ಇದರ ಆಶ್ರಯದಲ್ಲಿ ನಡೆದ ಮೀಲಾದ್ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.

ಬುಖಾರಿ ಜುಮಾ ಮಸೀದಿಯ ಖತೀಬ್ ನಿಸಾರ್ ಮದನಿ ಕಾರ್ಯಕ್ರಮ ಉದ್ಘಾಟಿಸಿದರು. ಬುಖಾರಿ ಜುಮಾ ಮಸೀದಿಯ ಅಧ್ಯಕ್ಷ ಮುಹಮ್ಮದ್ ಅಲಿ ಸಖಾಫಿ ಅಶ್‌ಅರಿಯ್ಯ ಅಧ್ಯಕ್ಷತೆ ವಹಿಸಿದ್ದರು.

ಬಿಜೆಎಂ ಕಿನ್ಯ ಸಲಹೆಗಾರ ಸೈಯದ್ ಆಲವಿ ತಂಙಳ್ ಕಿನ್ಯ ದುಆ ನೆರವೇರಿಸಿದರು.

ಈ ಸಂದರ್ಭ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ಇಸ್ಮಾಯೀಲ್ ಹಾಜಿ ಚಯರ್ ವಳಚ್ಚಿಳ್, ಡಿಕೆಎಸ್‌ಸಿ ಸದಸ್ಯ ಅಬ್ಬಾಸ್ ಹಾಜಿ ಎಲಿಮಲೆ, ಕೆಸಿಎಫ್ ಸದಸ್ಯ ಸಿದ್ದೀಕ್ ಕೆ.ಸಿ. ರೋಡ್ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು.
 
ಮುಖ್ಯ ಅತಿಥಿಗಳಾಗಿ ಇಬ್ರಾಹೀಂ ಮದನಿ ಅಲ್‌ಕಾಮಿಲ್ ಕಿನ್ಯ, ಕೆ.ಎಸ್. ಅಹ್ಮದ್ ಕುಂಞಿ ಹಾಜಿ, ಪಿಎಸ್‌ಕೆ ಮುಹಮ್ಮದ್ ಕುಂಞಿ ಎಚ್.ಎಂ. ನಗರ, ಇಬ್ರಾಹೀಂ ಹಾಜಿ ಕಿನ್ಯ ದುಬೈ, ಬಿಜೆಎಂ ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಸೆಟ್ಟಿಬೈಲ್, ಕೆಸಿಎಫ್ ಮದೀನ ಅಶ್ರಫ್ ಎಂಎಂಪಿ, ಮುಹಮ್ಮದ್ ಉಳ್ಳಾಲ್ ಕೆಸಿಎಫ್ ಅಲ್ ಅಸಾ, ಉಸ್ಮಾನ್ ಝುಹ್‌ರಿ ಕೆಸಿಎಫ್ ಜುಬೈಲ್, ಸಿದ್ದೀಕ್ ಕೆ.ಸಿ. ರೋಡ್ ಉಪಸ್ಥಿತರಿದ್ದರು.

ಸೈಯದ್ ಝೈನುಲ್ ಆಬೀದೀನ್ ತಂಙಳ್ ಸ್ವಾಗತಿಸಿದರು. ಇಸ್ಮಾಯೀಲ್ ಸಅದಿ ಕಿನ್ಯ ಕಾರ್ಯಕ್ರಮ ನಿರೂಪಿಸಿದರು.
 

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News