ಭಟ್ಕಳ: ಜೀವ ಬೆದರಿಕೆ ಪರಸ್ಪರ ದೂರು ದಾಖಲು

Update: 2016-12-19 18:16 GMT

ಭಟ್ಕಳ , ಡಿ.19 :  ಜಿಮ್‌ನ ವಿಷಯಕ್ಕೆ ಸಂಬಂಧಪಟ್ಟಂತೆ ಪಿಎಲ್‌ಡಿ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ವಿ.ಎಂ ನಾಯ್ಕ ಹಾಗೂ ತಾಲ್ಲೂಕು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಶಂಕರ ನಾಯ್ಕ ನಡುವೆ ನಡೆದಿದ್ದ ಮಾತಿನ ಚಕಮಕಿ,ಜೀವ ಬೆದರಿಕೆ ಕುರಿತು ನೀಡಿದ್ದ ಪರಸ್ಪರ ದೂರಿನ ಕುರಿತು ಇಲ್ಲಿನ ನಗರ  ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿ.7ರಂದು ನಡೆದಿದ್ದ ಘಟನೆಯಲ್ಲಿ ಬಿ.ಜೆ.ಪಿ ಶಂಕರ ನಾಯ್ಕ,ಪಿಎಲ್‌ಡಿ ಬ್ಯಾಂಕ್‌ನ ಮೊದಲನೇ ಮಹಡಿಯಲ್ಲಿ ಇರುವ ಜಿಮ್‌ಗೆ ಹೋಗುವ ಸಂದರ್ಭದಲ್ಲಿ,ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕರಾದ ವಿ.ಎಂ ನಾಯ್ಕ ಮತ್ತಿತರರು, 24ಗಂಟೆಯೊಳಗೆ ಜಿಮ್‌ನ್ನು ಕೂಡಲೇ ಖಾಲಿ ಮಾಡಬೇಕು ಎಂದು ಹೇಳಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ಕೈಯಲ್ಲಿದ್ದ ಬಂಗಾರದ ಉಂಗುರ ಮತ್ತು 4 ಸಾವಿರ ರೂಪಾಯಿ ನಗದನ್ನು ಕಿತ್ತುಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು.

ಇದಕ್ಕೆ ಪ್ರತಿಯಾಗಿ ಪಿಎಲ್‌ಡಿ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ವಿ.ಎಂ ನಾಯ್ಕ,ಶಂಕರ ನಾಯ್ಕ ಮತ್ತು ಕೇಶವ ನಾಯ್ಕ,ಬ್ಯಾಂಕ್‌ನ ಪ್ರಧಾನ ಕಚೇರಿಗೆ ನುಗ್ಗಿ,ಅವ್ಯಾಚ್ಯವಾಗಿ ನಿಂದಿಸಿ,ನನ್ನ ಭಾವನ ಜಿಮ್‌ನ ಸುದ್ದಿಗೆ ಬಂದರೆ ನಿಮ್ಮನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಲ್ಲದೇ,ತಡೆಯಲು ಬಂದ ನಿರ್ದೇಶಕ ಈಶ್ವರ ನಾಯ್ಕರನ್ನು ದೂಡಿ ಹಾಕಿ ಬ್ಯಾಂಕ್‌ನ ದಾಖಲೆಗಳನ್ನೆಲ್ಲಾ ಕಿತ್ತೆಸೆದಿದ್ದಾರೆ ಎಂದು ತಿಳಿಸಿದ್ದರು.

ಕೇವಲ ದೂರನ್ನು ಸ್ವೀಕರಿಸಿದ್ದ ಪೊಲೀಸರು,ಭಾನುವಾರ ಅಧೀಕೃತವಾಗಿ ಪರಸ್ಪರ ದೂರಿನ ಪ್ರಕರಣ ದಾಖಲಿಸಿಕೊಂಡು ಕಾನೂನುಕ್ರಮ ಜರುಗಿಸಿದ್ದಾರೆ.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News