ಅಧ್ಯಯನ ಪೀಠದ ನಿರ್ದೇಶಕರಾಗಿ ಮುದ್ದು ಮೂಡುಬೆಳ್ಳೆ ನೇಮಕ

Update: 2016-12-19 18:42 GMT

 ಮಂಗಳೂರು, ನ.19: ಕರ್ನಾಟಕ ಸರಕಾರದ ಅನುದಾನ, ಆದೇಶದ ಮೇರೆಗೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನೂತನವಾಗಿ ಸ್ಥಾಪನೆಗೊಂಡಿರುವ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠದ ನಿರ್ದೇಶಕರಾಗಿ ಆಕಾಶವಾಣಿಯ ವಿಶ್ರಾಂತ ಹಿರಿಯ ಉದ್ಘೋಷಕ ಶ್ರೀಮುದ್ದುಮೂಡುಬೆಳ್ಳೆ ನೇಮಕಗೊಂಡಿದ್ದಾರೆ.


ಮಾಧ್ಯಮದ ವಿವಿಧ ವಿಭಾಗಗಳಲ್ಲಿ ಸುದೀರ್ಘ ಅನುಭವದ ಮೂಡುಬೆಳ್ಳೆ, ಆಕಾಶವಾಣಿಯ ರಾಜ್ಯ ಮತ್ತು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು. ಬಹುಭಾಷೆ, ಬಹುಸಂಸ್ಕೃತಿಗಳ ಪರಿಚಿತರಾಗಿ, ಕನ್ನಡ ಮತ್ತು ತುಳುವಿನಲ್ಲಿ 30ಕ್ಕೂ ಮಿಕ್ಕ ಕೃತಿಗಳ ಲೇಖಕರು, ಸಂಪಾದಕರು. ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತಾಗಿ ಕಳೆದ ಮೂರು ದಶಕಗಳಿಂದ (1987) ಅಧ್ಯಯನ, ಉಪನ್ಯಾಸಗಳ ಹಿನ್ನೆಲೆ ಹೊಂದಿದ್ದು, ಎರಡು ಕೃತಿಗಳನ್ನು, ಗುರುಗಳ ಜೀವನ ಸಾಧನೆ ಸಂದೇಶಗಳ ಕುರಿತಾದ ಸಾಕ್ಷ ರೂಪಕವನ್ನೂ ನಿರ್ಮಿಸಿದ್ದಾರೆ. ರೇಡಿಯೋದಲ್ಲಿ 25 ವರ್ಷಗಳ ಹಿಂದಿನಿಂದಲೂ ಗುರುಸಂದೇಶ ಕಾರ್ಯಕ್ರಮ ಪ್ರಸಾರ ಮಾಡುತ್ತಿದ್ದು, ಇತ್ತೀಚೆಗೆ ಆಡಿಯೋ ಧ್ವನಿ ಸುರುಳಿಯನ್ನೂ ಹೊರತಂದಿರುವರು.


ಮುಂದಿನ ಮೂರುವರ್ಷಗಳವರೆಗೆ ಅಥವಾ ವಿ.ವಿ.ಯ ಮುಂದಿನ ಆದೇಶದವರೆಗೆ ಶ್ರೀಯುತರು ವಿ.ವಿ.ಯ ಪೀಠದ ಧ್ಯೇಯೋದ್ದೇಶಗಳನ್ನು ಕಾರ್ಯರೂಪಕ್ಕೆ ತರಲು ಕೆಲಸ ಮಾಡುವರು ಎಂದು ವಿ.ವಿ. ಕುಲಸಚಿವರ ಜ್ಞಾಪನಾಪತ್ರ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News