×
Ad

ಹೊಯ್ಗೆಬಜಾರ್: ಕಚೇರಿಗೆ ನುಗ್ಗಿ ಕಳವು

Update: 2016-12-20 00:23 IST

ಮಂಗಳೂರು, ಡಿ.19:ನಗರದ ಹೊಯ್ಗೆಬಜಾರ್‌ನ ನೂತನ ಕಾಂಪ್ಲೆಕ್ಸ್‌ವೊಂ ದರಲ್ಲಿರುವ ಮೀನಿನ ವ್ಯವಹಾರದ ಕಚೇರಿಗೆ ರವಿವಾರ ರಾತ್ರಿ 9ರಿಂದ ಡಿ.19ರ ಬೆಳಗ್ಗೆ 9ರ ಮಧ್ಯೆ ಬೀಗ ಮುರಿದು ಒಳ ನುಗ್ಗಿದ ಕಳ್ಳರು 1 ಕ್ಯಾಮರಾ, 1 ಮೊಬೈಲ್ ಫೋನ್ ಹಾಗೂ 26 ಗ್ರಾಂ ತೂಕದ ಚಿನ್ನದ ಸರ ಕಳವು ಮಾಡಿದ್ದಾರೆ.
ಕಳವಾದ ಸೊತ್ತಿನ ವೌಲ್ಯ 1,01,000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಸುದೀಪ್ ಎಚ್. ಎಂಬವರು ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News