ಜಲಜನಕ ಉತ್ಪಾದನೆಯ ನೂತನ ವಿಧಾನ ಆವಿಷ್ಕಾರ
ರಿಯಾದ್, ಡಿ. 19: ಭಾರದ ಪೆಟ್ರೋಲಿಯಂ ಹೈಡ್ರೊಕಾರ್ಬನ್‌ಗಳನ್ನು ಬೃಹತ್ ಪ್ರಮಾಣದಲ್ಲಿ ಜಲಜನಕ ಆಗಿ ಪರಿವರ್ತಿಸುವ ನೂತನ ವೇಗದ ಹಾಗೂ ಸುರಕ್ಷಿತ ವಿಧಾನವೊಂದನ್ನು ಸೌದಿ-ಬ್ರಿಟಿಷ್ ಜಂಟಿ ಸಂಶೋಧನಾ ತಂಡವೊಂದು ಸಂಶೋಧಿಸಿದೆ.
ಅಭಿವೃದ್ಧಿಗೊಳಿಸಲಾದ ಮೈಕ್ರೊವೇವ್ ರಿಯಾಕ್ಟರ್‌ನಲ್ಲಿ ಕ್ಯಾಟಲಿಸ್ಟ್ ಒಂದನ್ನು ಬಳಸಿ ರಾಸಾಯನಿಕ ಕ್ರಿಯೆಯನ್ನು ಏರ್ಪಡಿಸುವ ವಿಧಾನವನ್ನು ಎಕ್ಸಲೆನ್ಸ್ ಸೆಂಟರ್ ಆಫ್ ಕಿಂಗ್ ಅಬ್ದುಲಝೀಝ್ ಸಿಟಿ ಫಾರ್ ಸಯನ್ಸ್ ಆ್ಯಂಡ್ ಟೆಕ್ನಾಲಜಿ (ಕೆಎಸಿಎಸ್‌ಟಿ) ಮತ್ತು ಆಕ್ಸ್‌ಫರ್ಡ್ ಯುನಿವರ್ಸಿಟಿ ಫಾರ್ ಜಾಯಿಂಟ್ ಪೆಟ್ರೊಕೆಮಿಕಲ್ಸ್ ರಿಸರ್ಚ್‌ನ ಸಂಶೋಧಕರು ಕಂಡುಹಿಡಿದಿದ್ದಾರೆ. ವಿಜ್ಞಾನ ಪತ್ರಿಕೆ ‘ನೇಚರ್’ ತನ್ನ ಹೊಸ ಸಂಚಿಕೆಯಲ್ಲಿ ಈ ಸಂಶೋಧನೆಯನ್ನು ಪ್ರಕಟಿಸಿದೆ ಎಂದು ಕೆಎಸಿಎಸ್‌ಟಿಯ ಎಕ್ಸಲೆನ್ಸ್ ಸೆಂಟರ್ ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದೆ.ಇದು ಜಲಜನಕ ಚಾಲಿತ ಕಾರುಗಳ ಆವಿಷ್ಕಾರಕ್ಕೆ ದಾರಿ ಸುಗಮಗೊಳಿಸಬಹುದು ಎಂದು ಅದು ಹೇಳಿದೆ.
ತೈಲವನ್ನು ಈ ರೀತಿಯಲ್ಲಿ ಇಂಧನವಾಗಿ ಬಳಸುವುದರಿಂದ ಪರಿಸರ ಸಂರಕ್ಷಣೆಗೂ ದೇಣಿಗೆ ನೀಡಿದಂತಾಗುತ್ತದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.