ಬರ್ಲಿನ್‌ ನಲ್ಲಿ ಮಾರುಕಟ್ಟೆಗೆ ನುಗ್ಗಿದ ಟ್ರಕ್ ; 12 ಸಾವು

Update: 2016-12-20 04:54 GMT

ಬರ್ಲಿನ್‌, ಡಿ.20: ಬರ್ಲಿನ್ ನಲ್ಲಿ ಕ್ರಿಸ್ಮಸ್‌ ಮಾರುಕಟ್ಟೆಗೆ ಟ್ರಕ್ ನುಗ್ಗಿದ ಪರಿಣಾಮವಾಗಿ 12ಮಂದಿ ಮೃತಪಟ್ಟು 45ಕ್ಕೂ ಅಧಿಕ ಮಂದಿಗೆ ಗಾಯವಾಗಿರುವ ಘಟನೆ ಸೋಮವಾರ ನಡೆದಿದೆ
ಅಫ್ಘಾನಿಸ್ತಾನ ಅಥವಾ ಪಾಕ್ ನ ಉಗ್ರರು ದಾಳಿ ನಡೆಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ .

ಕ್ರಿಸ್ಮಸ್ ಹಬ್ಬದ ತಯಾರಿಗಾಗಿ  ಐಕೋನಿಕ್ ಕೈಸರ್ ವಿಲ್ಹೆಲ್ಮ್ ಮೆಮೋರಿಯಲ್ ಚರ್ಚ್ ಬಳಿರುವ ಕ್ರಿಸ್'ಮಸ್ ಮಾರುಕಟ್ಟೆ ರಸ್ತೆ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಈ ಸಂದರ್ಭವನ್ನೇ ಎದುರು ನೋಡುತ್ತಿದ್ದ ಶಂಕಿತ ಉಗ್ರರು ಜನನಿಬಿಡ ಪ್ರದೇಶದ ಮೇಲೆ ಟ್ರಕ್ ನುಗ್ಗಿಸಿದ್ದಾರೆ ಎಂದು ತಿಳಿದು ಬಂದಿದೆ
ಟ್ರಕ್ ನಲ್ಲಿದ್ದ ಎಲ್ಲಾ ಜನರು ಸಾವನ್ನಪ್ಪಿದ್ದಾರೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬಂದಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಕಳೆದ ಜುಲೈನಲ್ಲಿ ಫ್ರಾನ್ಸ್‌ ನ ನೈಸ್‌ ನಗರದಲ್ಲಿ ಇದೇ ರೀತಿಯ ದಾಳಿ ನಡೆದಿತ್ತು

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News