ಪ್ರವಾದಿ ಚರ್ಯೆಯನ್ನು ಜೀವನದಲ್ಲಿ ಅನುಸರಿಸಿ: ಕೀಚೇರಿ ಅಬ್ದುಲ್ ಗಫೂರ್ ಮೌಲವಿ
ಮಂಜೇಶ್ವರ, ಡಿ.20: ಪ್ರವಾದಿ ಮುಹಮ್ಮದ್ ಪೈಗಂಬರರ ಅನುಯಾಯಿಗಳಾದ ನಾವು ಜೀವನದಲ್ಲಿ ಪ್ರವಾದಿ ಚರ್ಯೆಯನ್ನು ರೂಢಿಸಿಕೊಳ್ಳಬೇಕೆಂದು ಖ್ಯಾತ ವಾಗ್ಮಿ ಕೀಚೇರಿ ಅಬ್ದುಲ್ ಗಫೂರ್ ಮೌಲವಿ ಕರೆ ನೀಡಿದ್ದಾರೆ. ಅವರು ಮಚ್ಚಂಪಾಡಿ ಜುಮಾ ಮಸೀದಿ ಹಾಗೂ ಹಿಮಾಯತುಲ್ ಇಸ್ಲಾಂ ಮದ್ರಸ ಮೀಲಾದ್ ಕಮಿಟಿ ಜಂಠಿ ಆಶ್ರಯದಲ್ಲಿ ಮೀಲಾದುನಬಿ ಪ್ರಯುಕ್ತ ಆಯೋಜಿಸಿದ್ದ ಏಕದಿನ ಪ್ರವಚನದಲ್ಲಿ ಭಾಷಣ ಮಾಡುತ್ತಿದ್ದರು. ಇಂದಿನ ದಿನಗಳಲ್ಲಿ ಯುವ ಸಮೂಹ ಮಾಧಕ ವ್ಯಸನಗಳಿಗೆ ಮಾರು ಹೋಗುತ್ತಿದ್ದಾರೆ. ಇದು ಆಘಾತಕಾರಿ ಇದರ ನಿಯಂತ್ರಣಕ್ಕೆ ಮಹಲ್‌ನ ನೇತಾರರು ಹಾಗೂ ಖತೀಬರು ಬೋಧನೆಗಳನ್ನು ನೀಡುವ ಮೂಲಕ ನಿಯಂತ್ರಿಸಬೇಕು ಎಂದರು. ಮಚ್ಚಂಪಾಡಿ ಮುದರ್ರಿಸ್ ಬಶೀರ್ ಬಾಖವಿ ಉದ್ಘಾಟಿಸಿದರು. ಜಮಾಅತ್ ಅಧ್ಯಕ್ಷ ಹುಸೈನಾರ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪಿ.ಎಚ್.ಅಬ್ದುಲ್ ಹಮೀದ್, ಖಾದರ್ ಹಾಜಿ, ಸದರ್ ಮುಅಲ್ಲಿಂ ಶಬೀರ್ ಬಾಖವಿ, ಮಹ್ಮೂದ್ ದಾರಿಮಿ, ಉಮರುಲ್ ಫಾರೂಕ್ ಮದನಿ, ಅಬಚ್ಚ, ಅಝೀರ್ ಹಾಜಿ, ಅಬ್ದುಲ್ ರಹಿಮಾನ್ ಹಾಜಿ, ಇಬ್ರಾಹಿಂ ಮುಸ್ಲಿಯಾರ್, ಬಶೀರ್ ಹಾಜಿ, ಅಬ್ಬಾಸ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಆರಿಫ್ ಮಚ್ಚಂಪಾಡಿ ಸ್ವಾಗತಿಸಿದರು. ಮಜೀದ್ ಇಡಿಯ ವಂದಿಸಿದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.