×
Ad

ಶಿಕ್ಷಕನಿಗೆ ಢಿಕ್ಕಿಹೊಡೆದು ಪರಾರಿಯಾಗಿದ್ದ ಬಸ್ ಪತ್ತೆ

Update: 2016-12-20 14:38 IST

ಬೆಳ್ತಂಗಡಿ, ಡಿ.20: ಗುರವಾಯನಕೆರೆ ಸಮೀಪ ಬೆಳಗ್ಗಿನ ಜಾವ ವಾಕಿಂಗ್ ಗೆ ಹೊರಟಿದ್ದ ಶಿಕ್ಷಕನಿಗೆ ಢಿಕ್ಕಿಹೊಡೆದು ಪರಾರಿಯಾಗಿದ್ದ ಬಸ್ಸನ್ನು ಉಡುಪಿಯಲ್ಲಿ ಪತ್ತೆಹಚ್ಚಲಾಗಿದೆ

ಇಂದು ಬೆಳಗಿಗನ ಜಾವ ಗುರುವಾಯನಕೆರೆ ಸಮೀಪ ಶಿಕ್ಷಕ ದಿನಕರ ಹೆಗ್ಡೆ ಎಂಬವರು ಅಪರಿಚಿತ ವಾಹನ ಢಿಕ್ಕಿ ಹೊಡೆದು ಮೃತ ಪಟ್ಟಿದ್ದರು. ರಸ್ತೆ ಬದಿಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಬೆಳ್ತಂಗಡಿ ತಾಲೂಕಿನ ನಾರಾವಿ ಸಮೀಪ ಕುತ್ಲೂರು ನಿವಾಸಿಯಾಗಿರುವ ಇವರು ಬೆಳ್ತಂಗಡಿ ಸಮೀಪ ಮುಂಡೂರು ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಕೋಲಾರದಿಂದ ಮಕ್ಕಳನ್ನು ಪ್ರವಾಸಕ್ಕೆ ಕರೆತಂದಿದ್ದ ಖಾಸಗಿ ಬಸ್ ಶಿಕ್ಷಕನಿಗೆ ಢಿಕ್ಕಿಹೊಡೆದು ಪರಾರಿಯಾಗಿತ್ತು. ಬೆಳ್ತಂಗಡಿ ಪೋಲೀಸರು ನೀಡಿದ ಮಾಹಿತಿ ಯಂತೆ ಉಡುಪಿಯಲ್ಲಿ ಇದೀಗ ಬಸ್ ಅನ್ನು ಪತ್ತೆ ಹಚ್ಚಲಾಗಿದೆ.

ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದ್ದು,  ಶಿಕ್ಷಕನಿಗೆ ಢಿಕ್ಕಿ ಹೊಡೆದ ಬಸ್ ಕನಿಷ್ಠ ಅವರಿಗೆ ನೆರವಾಗದೆ ಪರಾರಿಯಾಗಿ ಈಗ ಸಿಕ್ಕಿ ಬಿದ್ದಿದ್ದಾನೆ.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News