ಕೋಟೆಪುರ: ಟಿಪ್ಪು ಸುಲ್ತಾನ್ ಶಾಲೆಯ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

Update: 2016-12-20 12:26 GMT

ಉಳ್ಳಾಲ , ಡಿ.20 : ವಿದ್ಯಾರ್ಥಿ ಜೀವನದಲ್ಲೇ ಸಂಸ್ಕಾರ ಬೆಳೆಸಿಕೊಂಡಲ್ಲಿ ಸಮಾಜಕ್ಕೆ ಉತ್ತಮ ಪ್ರಜೆ ನೀಡುವ ಜೊತೆ ವೈಯುಕ್ತಿಕ ಬೆಳವಣಿಗೆಗೂ ಸಹಕಾರಿ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ ಅಭಿಪ್ರಾಯಪಟ್ಟರು.

 ಅವರು ಕೋಟೆಪುರ ಟಿಪ್ಪು ಸುಲ್ತಾನ್ ಶಾಲೆಯ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.  

ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಹಣವಿದ್ದರೆ ಸಾಲದು, ಜೊತೆಗೆ ಗುಣವೂ ಅಗತ್ಯ. ಟಿಪ್ಪು ಸುಲ್ತಾನ್ ಶಾಲೆ ಹಣ ಹಾಗೂ ಗುಣ ಎರಡನ್ನೂ ಬೆರೆತುಕೊಂಡಿರುವ ಮಕ್ಕಳು ಇದ್ದಾರೆ. ಕನ್ನಡ ಶಾಲೆ ಉಳಿಸುವ ನಿಟ್ಟಿನಲ್ಲಿ ಶಿಕ್ಷಕ ವರ್ಗ ಪಡುತ್ತಿರುವ ಶ್ರಮ ಶ್ಲಾಘನೀಯ ಎಂದರು.
 

ಕ್ರೀಡಾಕೂಟದಲ್ಲಿ ಸಂಸ್ಕಾರ ಸಂಸ್ಕೃತಿ ಬಿಂಬಿಸುವ ನಿಟ್ಟಿನಲ್ಲಿ ನಡೆದ ಕಾರ್ಯಕ್ರಮ ಅದ್ಭುತವಾಗಿತ್ತು.

ಸಯ್ಯದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿಸಿದ್ದರು.

ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಎಂ.ಮುಸ್ತಫಾ ಪಥ ಸಂಚಲನಕ್ಕೆ ಚಾಲನೆ ನೀಡಿದರು.

ದರ್ಗಾ ಪ್ರ.ಕಾ.ಮೊಹಮ್ಮದ್ ತ್ವಾಹ ಕ್ರೀಡಾ ಜ್ಯೋತಿ ಬೆಳಗಿಸಿದರು.

ಚಾರಿಟೇಬಲ್ ಟ್ರಸ್ಟ್ ಪ್ರ.ಕಾ. ಮೊಹಮ್ಮದ್ ಅಫ್ತಾರ್ ಹುಸೈನ್ ಧ್ವಜರೋಹಣಗೈದರು.

ನಗರಸಭಾಧ್ಯಕ್ಷ ಹುಸೈನ್ ಕುಂಞಿಮೋನು ದಳ ಪುರಸ್ಕಾರ ಪ್ರದಾನ ಮಾಡಿದರು.

ಉದ್ಯಮಿ ಎಚ್.ಕೆ.ಖಾದರ್ ಬಹುಮಾನ ವಿತರಿಸಿದರು. ಕೋಟೆಪುರ ಜುಮಾ ಮಸೀದಿ ಅಧ್ಯಕ್ಷ ಯು.ಕೆ.ಬಾವ ಇಸ್ಮಾಯಿಲ್, ದರ್ಗಾ ಉಪಾಧ್ಯಕ್ಷರಾದ ಮೋನು ಇಸ್ಮಾಯಿಲ್, ಬಾವ ಮೊಹಮ್ಮದ್, ಕೋಶಾಧಿಕಾರಿ ಯು.ಕೆ.ಇಲ್ಯಾಸ್, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಇಬ್ರಾಹಿಂ, ಜ.ಕಾ. ಎ.ಕೆ.ಮೊಯಿದ್ದೀನ್, ಸದಸ್ಯ ಯು.ಹಸೈನಾರ್, ಆಡಳಿತಾಧಿಕಾರಿ ಅಬ್ದುಲ್ ಲತೀಫ್, ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ.ಎಂ.ಕೆ.ಮಂಜನಾಡಿ, ಸಂಸ್ಥೆಯ ಮಾಜಿ ಸಂಚಾಲಕ ಯು.ಕೆ.ಅಬ್ಬಾಸ್, ಯು.ಮೊಹಮ್ಮದ್ ಶಾಪಿ, ಸಯ್ಯದ್ ಮದನಿ ಅರೆಬಿಕ್ ಟ್ರಸ್ಟ್ ಪ್ರ.ಕಾ.ಅಮೀರ್, ಜ.ಕಾ. ಆಸಿಫ್ ಅಬ್ದುಲ್ಲಾ ಮೊದಲಾದವರು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕ ಎಂ.ಎಚ್.ಮಲಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಹ ಶಿಕ್ಷಕಿಯರಾದ ಮೆಟಿಲ್ಡಾ ಡಿಸೋಜ ಹಾಗೂ ಮಮತಾ ಬಹುಮಾನ ವಿಜೇತರ ಹೆಸರು ಓದಿದರು.

ಪ್ರಭಾರ ಮುಖ್ಯ ಶಿಕ್ಷಕಿ ಗೀತಾ ಡಿ ವಂದಿಸಿದರು.

ವಿದ್ಯಾರ್ಥಿನಿಯರಾದ ಸಹರ ಸಹನೀಯ ಹಾಗೂ ಫಾತಿಮಾ ಸುಹಾ ಕಾರ್ಯಕ್ರಮ ನಿರೂಪಿಸಿದರು.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News