×
Ad

ಬೃಹತ್ ಪ್ರಮಾಣದ ಪಾನ್ ಮಸಾಲೆ ವಶ: ಬದಿಯಡ್ಕದಲ್ಲಿ ಓರ್ವ ಬಂಧನ

Update: 2016-12-20 20:36 IST

ಮಂಜೇಶ್ವರ , ಡಿ.20 : ಜೀನಸು ಸಾಮಗ್ರಿ ಸಾಗಾಟದ ಮರೆಯಲ್ಲಿ ಸಾಗಿಸುತ್ತಿದ್ದ ಬೃಹತ್ ಪ್ರಮಾಣದ ಪಾನ್ ಮಸಾಲೆಯನ್ನು ಬದಿಯಡ್ಕ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಓರ್ವನನ್ನು ಬಂಧಿಸಲಾಗಿದೆ.  

ಜೀನಸು ಸಾಮಗ್ರಿಗಳನ್ನು ಹೇರಿದ ವಾಹನದಲ್ಲಿ ಪಾನ್‌ಮಸಾಲೆ ಸಾಗಾಟ ನಡೆಯುತ್ತಿದೆಯೆಂಬ ಮಾಹಿತಿ ಲಭಿಸಿದ ಪೊಲೀಸ್ ತಂಡ ಪೆರ್ಲ ಪರಿಸರದಲ್ಲಿ ಹೊಂಚು ಹಾಕಿ ನಡೆಸಿದ ಕಾರ್ಯಾಚರಣೆಯಲ್ಲಿ ಇಕೋ ವಾಹನವನ್ನು ವಶಪಡಡಿಸಿಕೊಳ್ಳಲಾಗಿದೆ.

ವಾಹನದಲ್ಲಿದ್ದ 21 ಸಾವಿರ ಮಾರುತಿ, 6 ಸಾವಿರ ಮಧು ಸಹಿತ 2700 ಪ್ಯಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಾಹನದಲ್ಲಿ 4 ಗೋಣಿ ನೀರುಳ್ಳಿ, ಅಕ್ಕಿ, ಬಿಸ್ಕತ್ತು ಪ್ಯಾಕೆಟ್ ಗಳಿತ್ತೆಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಒಂದು ವಾರದಲ್ಲಿ ಪೊಲೀಸರು ನಡೆಸುವ ಎರಡನೇ ಬೃಹತ್ ಪಾನ್ ಮಸಾಲೆ ಕಾರ್ಯಾಚರಣೆಯಾಗಿದೆ.

ಬದಿಯಡ್ಕ ಪೇಟೆ ವ್ಯಾಪಾರಿಯ ಮನೆಯಿಂದ 14 ಸಾವಿರ ಪಾನ್ ಪರಾಗ್‌ಗಳು ಪೊಲೀಸರು ಐದು ದಿನಗಳ ಹಿಂದೆ ವಶಪಡಿಸಿದ್ದರು.

ಎಎಸ್‌ಐ ಸುಂದರನ್, ವೇಲಾಯುಧನ್, ಮನು, ರತೀಶ್, ಚಾಲಕ ಬೈಜು ಎಂಬವರು ಈ ಕಾರ್ಯಾಚರಣೆಗೆ ನೇತೃತ್ವ ನೀಡಿದ್ದಾರೆ.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News