ಪ್ರವೀಣ್ ಕುಲಾಲ್ ಕೊಲೆ: ಮೂವರ ಬಂಧನ
ಹಿರಿಯಡ್ಕ, ಡಿ.20: ರೌಡಿ ವರ್ವಾಡಿ ಪ್ರವೀಣ್ ಕುಲಾಲ್(36) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯಡಕ ಪೊಲೀಸರು ಮೂವರು ಆರೋಪಿ ಗಳನ್ನು ಬಂಧಿಸಿದ್ದಾರೆ.
ಆರೋಪಿಗಳಾದ ಪುತ್ತಿಗೆ ಸಂತೋಷ, ಲತೇಶ್ ಎಂಬವರನ್ನು ನಿನ್ನೆಯೇ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.
ತಲೆಮರೆಸಿಕೊಂಡಿದ್ದ ಇನ್ನೊರ್ವ ಆರೋಪಿ ಒಂತಿಬೆಟ್ಟು ಸಮೀಪದ ಮಾಂಬೆಟ್ಟು ಸಂತೋಷ ಎಂಬಾತನನ್ನು ಇಂದು ಪೊಲೀಸರು ಬಂಧಿಸಿದ್ದಾರೆ.
ನಿನ್ನೆ ಕೊಲೆ ಮಾಡುವ ಸಂದರ್ಭದಲ್ಲಿ ಪ್ರವೀಣ್ ಕುಲಾಲ್ ಅಲ್ಲೇ ಸಮೀಪದ ಅಂಗಡಿಯಲ್ಲಿದ್ದ ಎಳನೀರು ಕೊಚ್ಚುವ ಕತ್ತಿಯಿಂದ ಪುತ್ತಿಗೆ ಸಂತೋಷ್ ಹಾಗೂ ಲತೇಶ್ ಮೇಲೆ ದಾಳಿ ನಡೆಸಿದ್ದನು. ಇದರಿಂದ ಇವರಿಬ್ಬರು ಕೈ ಹಾಗೂ ಕಾಲಿಗೆ ತೀವ್ರವಾದ ಗಾಯಗಳಾಗಿವೆ.
ಆದುದರಿಂದ ಅವರಿಬ್ಬರನ್ನು ಉಡುಪಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
‘ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದ್ದು, ತನಿಖೆ ಮುಂದು ವರೆದಿದೆ. ಇದರಲ್ಲಿ ಇನ್ನು ಬೇರೆಯವರು ಭಾಗಿಯಾಗಿದ್ದಾರೆಯೇ ಎಂಬುದು ತನಿಖೆಯಿಂದ ಸಾಬೀತಾಗಬೇಕಾಗಿದೆ’ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.