ಕೆಎಸ್ಸಾರ್ಟಿಸಿಯಿಂದ ಪುತ್ತೂರು-ಮಂಗಳೂರು ನಿತ್ಯ ಪ್ರಯಾಣಿಕರಿಗೆ ರಿಯಾಯಿತಿ
Update: 2016-12-20 22:04 IST
ಪುತ್ತೂರು , ಡಿ. 20 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಸಾರ್ಟಿಸಿ) ಪುತ್ತೂರು ವಿಭಾಗದ ವತಿಯಿಂದ ಪುತ್ತೂರು- ಮಂಗಳೂರು ನಡುವೆ ನಿತ್ಯ ಪ್ರಯಾಣಿಸುವ ಪ್ರಯಾಣಿಕರಿಗೆ ಮಾಸಿಕ ಸೀಸನ್ ಬಸ್ಸು ಪಾಸುಗಳ ದರದಲ್ಲಿ ಬಾರೀ ಇಳಿಕೆಯ ರಿಯಾಯಿತಿ ನೀಡಿದೆ.
ಪುತ್ತೂರಿನಿಂದ ಸ್ಟೇಟ್‌ಬ್ಯಾಂಕ್, ಮಂಗಳೂರು ಪ್ರಯಾಣಕ್ಕೆ ಮಾಸಿಕ ರೂ. 1540, ಬಿ.ಸಿ.ರೋಡ್‌ಗೆ ರೂ. 1120, ಬಿ.ಸಿ.ರೋಡ್‌ನಿಂದ ಸ್ಟೇಟ್‌ಬ್ಯಾಂಕ್, ಮಂಗಳೂರಿಗೆ ರೂ.1100, ಕಲ್ಲಡ್ಕದಿಂದ ಸ್ಟೇಟ್‌ಬ್ಯಾಂಕ್, ಮಂಗಳೂರಿಗೆ ರೂ. 1220 ಮತ್ತು ಮಾಣಿಯಿಂದ ಸ್ಟೇಟ್‌ಬ್ಯಾಂಕ್, ಮಂಗಳೂರಿಗೆ ರೂ. 1300 ದರ ನಿಗದಿಪಡಿಸಿದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.