ಮುಕ್ತಾಯಗೊಂಡ ವಿಜ್ಞಾನ ಹಾಗೂ ಬೌದ್ದಧರ್ಮ ವಿಚಾರ ಸಂಕಿರಣ
ಮುಂಡಗೋಡ : ದಿ.17ರಿಂದ ನಡೆದ ವಿಜ್ಞಾನ ಹಾಗೂ ಬೌದ್ದಧರ್ಮ ಕುರಿತು ವಿಚಾರ ಸಂಕಿರಣ ವುಂಗಳವಾರ ಮುಕ್ತಾಯಗೊಂಡಿತು.
ಮುಂಡಗೋಡ ಟಿಬೇಟಿಕಾಲೋನಿಯ ಲಾಮಾ ಕ್ಯಾಂಪ್ ನಂ.2ರಲ್ಲಿರ ದ್ರೆಪುಂಗ್ ಲೊಸಲಿಂಗ್ ಬೌದ್ದಮಠದಲ್ಲಿ ಕಳೆದ ಮೂರು ದಿನದ ಈ ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಟಿಬೇಟಿಯನ್ ಧರ್ಮಗುರು ದಲೈಲಾಮಾ ವಹಿಸಿದ್ದರು.
ಮಂಗಳವಾರ ನಡೆದ ಮೊದಲ ಹಂತದ ವಿಚಾರ ಸಂಕಿರಣದಲ್ಲಿ ಮನಸ್ಸು ಅಂದರೇನು? ಮನಸ್ಸು, ಮಿದುಳು ಮತ್ತು ವೈಯಕ್ತಿಕ ಅನುಭವ ಹಾಗೂ ಸಂಬಂಧ ಕುರಿತು ಚರ್ಚೆ ನಡೆಯಿತು. ಮಧ್ಯಾಹ್ನ ನಡೆದ 2ನೇ ಹಂತದ ವಿಚಾರ ಸಂಕಿರಣದಲ್ಲಿ ನೈತಿಕ ಶಿಕ್ಷಣದ ಕುರಿತು ಚರ್ಚಿಸಲಾಯಿತು.
ಅಮೇರಿಕಾದ ಎಮೊರಿ ವಿಶ್ವವಿದ್ಯಾಲಯ, ದಲೈಲಾಮಾ ಟ್ರಸ್ಟ ಹಾಗೂ ದ್ರೆಪುಂಗ್ ಬೌದ್ದ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಮುಂಡಗೋಡ ಟಿಬೇಟಿಕಾಲೋನಿಯ ಲಾಮಾ ಕ್ಯಾಂಪ್ ನಂ.2ರಲ್ಲಿಯ ದ್ರೆಪುಂಗ್ ಲೊಸಲಿಂಗ್ ಬೌದ್ದಮಠದಲ್ಲಿ ವಿಜ್ಞಾನ ಹಾಗೂ ಬೌದ್ದಧರ್ಮ ಕುರಿತು ಈ ವಿಚಾರ ಸಂಕಿರಣ ನಡೆಯಿತು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.