×
Ad

ಅಮರನಾಥ ಶೆಟ್ಟಿ, ಡಾ.ಸೋನ್ಸ್‌ರಿಗೆ ಸನ್ಮಾನ

Update: 2016-12-21 00:27 IST

ಮೂಡುಬಿದಿರೆ, ಡಿ.20: ಅಲಂಗಾರಿನ ಹೋಲಿ ರೋಜರಿ ಚರ್ಚ್, ಅಲಯನ್ಸ್ ಕ್ಲಬ್, ಬಡಗು ಶ್ರೀಮಹಾಲಿಂಗೇಶ್ವರ ದೇವಸ್ಥಾನ, ಕ್ರಿಸ್ತಶಾಂತಿ ಹಾಗೂ ಸಿಯೋಬ್ ದೇವಾಲಯ,ರೋಟರಿ ಕ್ಲಬ್ ಮೂಡುಬಿದಿರೆ, ಮೂಡುಬಿದಿರೆ ಪ್ರೆಸ್‌ಕ್ಲಬ್ ಹಾಗೂ ಸೈಂಟ್ ಥೋಮಸ್ ವಿದ್ಯಾಸಂಸ್ಥೆಗಳ ಸಹಯೋಗದೊಂದಿಗೆ ಚರ್ಚ್‌ನ ಬಯಲು ರಂಗಮಂದಿರದಲ್ಲಿ ಕ್ರಿಸ್ಮಸ್ ಸೌಹಾರ್ದಕೂಟ ಇತ್ತೀಚೆಗೆ ನಡೆಯಿತು.

ಇದೇ ವೇಳೆ ರಾಜ್ಯ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಕೆ.ಅಮರನಾಥ ಶೆಟ್ಟಿ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪ್ರಗತಿಪರ ಕೃಷಿಕ ಡಾ.ಎಲ್.ಸಿ ಸೋನ್ಸ್‌ರನ್ನು ಸನ್ಮಾನಿಸಲಾಯಿತು. ಶಾಸಕ ಕೆ.ಅಭಯಚಂದ್ರ ಜೈನ್, ಕೇಕ್ ಕತ್ತರಿಸುವ ಮೂಲಕ ಸೌಹಾರ್ದ ಕೂಟಕ್ಕೆ ಚಾಲನೆ ನೀಡಿದರು. ಕೆಥೊಲಿಕ್ ವಿದ್ಯಾ ಸಂಸ್ಥೆಗಳ ಪ್ರಾಂತೀಯ ನಿರ್ದೇಶಕ ರೆ.ಡಾ.ಎವ್ಜಿನ್ ಲೋಬೊ ಅಧ್ಯಕ್ಷತೆ ವಹಿಸಿದ್ದರು. ನಿಟ್ಟೆ ಪಪೂ ಕಾಲೇಜಿನ ಉಪನ್ಯಾಸಕ ಸಿದ್ದಾಪುರ ವಾಸುದೇವ ಭಟ್ ಸೌಹಾರ್ದ ಸಂದೇಶ ನೀಡಿದರು. ಬಡಗು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಈಶ್ವರ ಭಟ್, ಕ್ರಿಸ್ತಶಾಂತಿ-ಸಿಯೋನ್ ದೇವಾಲಯದ ಧರ್ಮಗುರು ರೆ.ಸುಧೀರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ.ಜಗದೀಶ್ ಅಧಿಕಾರಿ, ಜೆಡಿಎಸ್ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಶ್ವಿನ್ ಪಿರೇರ, ಅಲಂಗಾರು ಲಯನ್ಸ್ ಕ್ಲಬ್ ಅಧ್ಯಕ್ಷೆ ರೂಪಾ ನಾಯಕ್, ಮೂಡುಬಿದಿರೆ ಪ್ರೆಸ್‌ಕ್ಲಬ್‌ನ ಕಾರ್ಯದರ್ಶಿ ಯಶೋಧರ ಬಂಗೇರ, ಉದ್ಯಮಿ ಮುಹಮ್ಮದಲಿ ಅಬ್ಬಾಸ್, ಸೈಂಟ್ ಥೋಮಸ್ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಸಿ.ಹೆಲೆನ್ ಗೋವಿಯಸ್, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಐರಿನ್ ತಾವ್ರೊ, ಅಲಂಗಾರು ಚರ್ಚ್ ಪಾಲನ ಪರಿಷತ್‌ನ ಉಪಾಧ್ಯಕ್ಷ ಜೆರಾಲ್ಡ್ ಲೋಬೊ ವೇದಿಕೆಯಲ್ಲಿದ್ದರು. ಅಲಂಗಾರು ಚರ್ಚ್‌ನ ಧರ್ಮಗುರು ರೆ.ಫಾ.ಬಾಸಿಲ್ ವಾಸ್ ಸ್ವಾಗತಿಸಿದರು. ಸಂತೋಷ್ ರೊಡ್ರಿಗಸ್ ಹಾಗೂ ಎಲ್ವಿರಾ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಧರ್ಮಗುರು ರೆ.ಫಾ ಕೆನೆತ್ ಕ್ರಾಸ್ತ ಸಹಕರಿಸಿದರು. ಹೆರಾಲ್ಡ್ ತಾವ್ರೊ ನೇತೃತ್ವದ ಗಾಯನ ಬಳಗದಿಂದ ಕ್ರಿಸ್ಮಸ್ ಗೀತೆ, ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News