×
Ad

ಮೆಕ್ಸಿಕೊ ಸುಡುಮದ್ದು ಮಾರುಕಟ್ಟೆಯಲ್ಲಿ ಭಾರೀ ಸ್ಫೋಟ: ಕನಿಷ್ಠ 27 ಬಲಿ

Update: 2016-12-21 09:02 IST

ಮೆಕ್ಸಿಕೊ ಸಿಟಿ, ಡಿ.21: ಮೆಕ್ಸಿಕೊ ರಾಜಧಾನಿಯ ಹೊರವಲಯದ ಸುಡುಮದ್ದು ಮಾರುಕಟ್ಟೆಯಲ್ಲಿ ಮಂಗಳವಾರ ಭೀಕರ ಸ್ಫೋಟ ಸಂಭವಿಸಿದ ಕನಿಷ್ಠ 27 ಮಂದಿ ಬಲಿಯಾಗಿದ್ದಾರೆ. 70ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಇಡೀ ಪ್ರದೇಶ ಸುಟ್ಟು ಕರಕಲಾಗಿದೆ.

ವರ್ಣಮಯ ವಸ್ತುಗಳು ಸ್ಫೋಟಗೊಂಡು, ಆಗಸಕ್ಕೆ ಭಾರಿ ಪ್ರಮಾಣದ ಬೆಂಕಿ ಹಾಗೂ ಹೊಗೆ ಹಬ್ಬುವ ದೃಶ್ಯಾವಳಿಯನ್ನು ಟೆಲಿವಿಷನ್‌ಗಳು ಪ್ರಸಾರ ಮಾಡಿವೆ. ಸುಡುಮದ್ದುಗಳ ದಾಸ್ತಾನಿಗೆ ಬೆಂಕಿ ಹತ್ತಿಕೊಂಡು ಈ ದುರಂತ ಸಂಭವಿಸಿರಬೇಕು ಎಂದು ಅಂದಾಜಿಸಲಾಗಿದ್ದು, ಬೆಂಕಿ ಹಾಗೂ ಹೊಗೆ ಆಗಸಕ್ಕೆ ಚಿಮ್ಮುವ ದೃಶ್ಯ ಯುದ್ಧ ಪ್ರದೇಶವನ್ನು ನೆನಪಿಸುವಂತಿತ್ತು.

ಜನಪ್ರಿಯ ಸ್ಯಾನ್ ಪಬ್ಲಿತೊ ಮಾರುಕಟ್ಟೆಯಲ್ಲಿ ಕಳೆದ ಒಂದು ದಶಕದಲ್ಲಿ ಸಂಭವಿಸುತ್ತಿರುವ ಮೂರನೇ ಸ್ಫೋಟ ಇದಾಗಿದ್ದು, ಮೆಕ್ಸಿಕೊ ಸಿಟಿಯಿಂದ 20 ಮೈಲಿ ದೂರದಲ್ಲಿ ಈ ಸ್ಫೋಟ ಸಂಭವಿಸಿದೆ. "ಒಂದು ಮಳಿಗೆಯಯಲ್ಲಿ ಸ್ಫೋಟ ಸಂಭವಿಸಿದಾಗ ನಾವು ಸ್ನಾನಗೃಹದಲ್ಲಿದ್ದೆವು. ಬಳಿಕ ಒಂದರ ಮೇಲೊಂದು ಸ್ಫೋಟದ ಸದ್ದುಗಳು ಕೇಳಿಬಂದವು ಎಂದು ಪ್ರತ್ಯಕ್ಷದರ್ಶಿ ಫೆಡೆರಿಕೊ ಝೂರೆಜ್ ಹೇಳಿದರು. ಪ್ರತಿಯೊಬ್ಬರೂ ತಪ್ಪಿಸಿಕೊಳ್ಳಲು ಓಡುತ್ತಿದ್ದರು. ಅವರ ಮೇಲೆ ಇಟ್ಟಿಗೆ ತುಂಡುಗಳು ಹಾಗೂ ಕಾಂಕ್ರಿಟ್ ಬಿದ್ದವು ಎಂದು ಅವರು ಹೇಳಿದ್ದಾರೆ.
27 ಮಂದಿ ಮೃತಪಟ್ಟಿರುವುದನ್ನು ತುಲ್ತೆಪೆಕ್ ತುರ್ತುಸೇವಾ ವಿಭಾಗದ ಮುಖ್ಯಸ್ಥ ಇಸಿಡ್ರೊ ಸ್ಯಾಂಚೆಜ್ ಖಚಿತಪಡಿಸಿದ್ದಾರೆ.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News