ಪಾಕ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಪ್ರಪ್ರಥಮ ಸಿಖ್
Update: 2016-12-21 11:14 IST
ಕರಾಚಿ, ಡಿ.21: ಪಾಕಿಸ್ತಾನದ ಲಾಹೋರ‍್ ನ ಪ್ರತಿಷ್ಠಿತ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆಯಲು ಮೊದಲ ಸಿಖ್ ಆಟಗಾರ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಲಾಹೋರ‍್ ನ ಮಣಿಂದರ‍್ ಪಾಲ್ ಸಿಂಗ್ ಅಕಾಡೆಮಿಯಲ್ಲಿ ಅವಕಾಶ ಪಡೆದ ಮೊದಲ ಸಿಖ್ ಆಟಗಾರ. ಒಟ್ಟು 30 ಮಂದಿ ಉದಯೋನ್ಮುಖ ಆಟಗಾರರು ಅಕಾಡೆಮಿಯಲ್ಲಿ ತರಬೇತಿಗೆ ಆಯ್ಕೆಯಾಗಿದ್ದಾರೆ. ಅವರಲ್ಲಿ ಮಣಿಂದರ್ ಪಾಲ್ ಸಿಂಗ್ ಒಬ್ಬರು.
ಪಾಕಿಸ್ತಾನದ ಕ್ರಿಕೆಟ್ ಚರಿತ್ರೆಯಲ್ಲಿ ಮುಸ್ಲಿಮರಲ್ಲದ 7 ಮಂದಿ ಕ್ರಿಕೆಟಿಗರು ಪಾಕ್ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚಿದ್ದಾರೆ. ಈ ಪೈಕಿ ದ್ಯಾನಿಶ್ ಕನೇರಿಯಾ ತಂಡಕ್ಕೆ ಸೇರ್ಪಡೆಗೊಂಡ ಕೊನೆಯ ಆಟಗಾರ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.