ಬೆಳ್ಮ ದೋಟಕ್ಕೆ ಡಿ.22ರಂದು ಡಾ.ಮೌಲಾನ ಫಾರೂಖ್ ನಈಮಿ
ದೇರಳಕಟ್ಟೆ, ಡಿ.21: ಬೆಳ್ಮ ದೋಟದ ಮದ್ರಸುತ್ತಿಬಿಯಾನ್ ಅರೆಬಿಕ್ ಕಾಲೇಜಿನ ಪ್ರಥಮ ವಾರ್ಷಿಕೋತ್ಸವ ಪ್ರಯುಕ್ತ ಇರ್ಷಾದುಸ್ಸಿಬಿಯಾನ್ ಹಳೆ ವಿದ್ಯಾರ್ಥಿ ಸಂಘ ಮತ್ತು ಯು.ಟಿ.ಫರೀದ್ ಫೌಂಡೇಶನ್ ಹಾಗೂ ಸಿ.ಎಂ. ಗ್ರೂಪ್ ಜಂಟಿ ಅಶ್ರಯದಲ್ಲಿ ಏಕದಿನ ಮಹಾಸಂಗಮ ಡಿ.22ರಂದು ಸಂಜೆ 6 ಗಂಟೆಗೆ ಬೆಳ್ಮದೋಟ ಗ್ರೌಂಡ್‌ನಲ್ಲಿ ನಡೆಯಲಿದೆ.
ಖಾಝಿ ಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಕಾರ್ಯಕ್ರಮದ ನೇತೃತ್ವ ವಹಿಸುವರು. ಖ್ಯಾತ ಭಾಷಣಕಾರ ಡಾ.ಮೌಲಾನ ಫಾರೂಖ್ ನಈಮಿ ಕೊಲ್ಲಂ ಮುಖ್ಯ ಭಾಷಣಗೈಯಲಿದ್ದಾರೆ. ಸಚಿವರಾದ ಬಿ.ರಮಾನಾಥ ರೈ, ಯು.ಟಿ .ಖಾದರ್, ಶಾಸಕ ಮೊಯ್ದಿನ್ ಬಾವ, ಕಣಚೂರು ಯು.ಕೆ.ಮೋನು, ಯೆನೆಪೊಯ ವಿವಿ ಕುಲಾಧಿಪತಿ ವೈ.ಅಬ್ದುಲ್ಲಾ ಕುಂಞಿ, ಶಾಫಿ ಸಅದಿ ಬೆಂಗಳೂರು, ಅಬ್ದುಲ್ ಅಝೀಝ್ ಮೈಸೂರು ಬಾವ, ಝಿಯಾದ್ ನದ್ವಿ, ಇಬ್ರಾಹೀಂ ಕೋಡಿಜಾಲ್ ಮುಂತಾದವರು ಭಾಗವಹಿಸಲ್ಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.