×
Ad

ಹೂಡೆ ಸಾಲಿಹಾತ್ ವಾರ್ಷಿಕ ಕ್ರೀಡಾಕೂಟ

Update: 2016-12-21 19:58 IST

ಉಡುಪಿ, ಡಿ.21: ಹೂಡೆ ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಯ ಶಾಲಾ ವಾರ್ಷಿಕ ಕ್ರೀಡಾಕೂಟಕ್ಕೆ ಉದ್ಯಮಿ ಜನಾಬ್ ಇರ್ಷಾದ್ ನೇಜಾರ್ ಇತ್ತೀಚೆಗೆ ಚಾಲನೆ ನೀಡಿದರು.

ಸೈಮ್ ಗ್ರೂಪ್‌ನ ಮಾಲಕ ಸಾದೀಕ್ ಕ್ರೀಡಾಕೂಟವನ್ನು ಉದ್ಘಾಟಿಸಿ ದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಅಬ್ದುಲ್ ಕಾದೀರ್ ಮೊಯ್ದೀನ್, ಇಮ್ತಿಯಾಝ್ ಜಿ., ಹುಸೇನ್ ಮಾಸ್ಟರ್, ಪ್ರೊ.ಅಬ್ದುಲ್ ಅಝೀಜ್ ಉಪಸ್ಥಿತರಿದ್ದರು.

ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಯ ಆಡಾಳಿತಧಿಕಾರಿ ಅಸ್ಲಾಮ್ ಹೈಕಾಡಿ ಸ್ವಾಗತಿಸಿದರು. ಶಾಬಾನಾ ಮಾಮ್ತಾಜ್ ವಂದಿಸಿದರು. ಆಶಾಲತಾ ಹಾಗೂ ಸಬೀಹಾ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಆಕರ್ಷಣೀಯ ಪಿರಮಿಡ್ ಮತ್ತು ದೈಹಿಕ ಕಸರತ್ತುಗಳನ್ನು ಪ್ರದರ್ಶಿಸಲಾಯಿತು.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News