×
Ad

ಮೂಳೂರು: ಗುಡ್ಡಗಾಡು ಓಟ- ಆಹಾರ ಉತ್ಸವ

Update: 2016-12-21 20:00 IST

ಕಾಪು, ಡಿ.21: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಇದರ ಅಧೀನದಲ್ಲಿ ರುವ ಮೂಳೂರು ಅಲ್ ಇಹ್ಸಾನ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಗಳ ಕ್ರಾಸ್ ಕಂಟ್ರಿ ಓಟವನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು.

ಓಟಕ್ಕೆ ಸಂಸ್ಥೆಯ ಕಾರ್ಯದರ್ಶಿ ವೈ.ಬಿ.ಸಿ.ಬಶೀರ್ ಅಲಿ ಮೂಳೂರು ಕಾರ್ಪೊರೇಶನ್ ಬ್ಯಾಂಕ್ ಬಳಿ ಚಾಲನೆ ನೀಡಿದರು. ಅಲ್ಲಿಂದ ಆರಂಭ ಗೊಂಡ 15 ಕಿ.ಮೀ. ದೂರದ ಓಟವು ಉಚ್ಚಿಲ- ಪಣಿಯೂರು- ಬೆಳಪು- ಪಕೀರ್ಣಕಟ್ಟೆ- ಮಲ್ಲಾರು- ಕೊಪ್ಪಲಂಗಡಿ ಮಾರ್ಗವಾಗಿ ಮೂಳೂರಿನಲ್ಲಿ ಸಮಾಪ್ತಿಗೊಂಡಿತು. ಅಲ್‌ಇಹ್ಸಾನ್ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಗಳಿಂದ ಏರ್ಪಡಿಸಲಾದ ಆಹಾರ ಉತ್ಸವವನ್ನು ಸಂಸ್ಥೆಯ ಮೆನೇಜರ್ ಯು.ಕೆ.ಮುಸ್ತಫಾ ಸಅದಿ ಉದ್ಘಾಟಿಸಿದರು.

ಉಪಾಧ್ಯಕ್ಷ ಎಂ.ಎಚ್.ಬಿ. ಮುಹಮ್ಮದ್, ಸದಸ್ಯರಾದ ಇಬ್ರಾಹಿಂ ಮನ್‌ಹರ್, ಪ್ರಾಂಶುಪಾಲ ಹಬೀಬುರ್ರಹ್ಮಾನ್, ಅಲ್‌ಇಹ್ಸಾನ್ ಬನಾತ್ ಕೇರ್‌ನ ಮುಖ್ಯಸ್ಥ ಮುಹಮ್ಮದ್ ಅಲ್‌ಕಾಸಿಮಿ ಅಳಿಕೆಮಜಲು, ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ಜಯಪ್ರಸನ್ನ ಉಪಸ್ಥಿತರಿದ್ದರು. ಉಪನ್ಯಾ ಸಕಿ ಫಾತಿಮತುಲ್ ಅಶುರಾ, ದೈಹಿಕ ಶಿಕ್ಷಣ ಶಿಕ್ಷಕ ಬಶೀರ್ ಎಂ. ಸಹಕರಿಸಿದರು.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News