ಫಾ| ಮೈಕಲ್ ಲೋಬೊರಿಗೆ ಕುವೆಂಪು ವಿಶ್ವವಿದ್ಯಾನಿಲಯದ ಚಿನ್ನದ ಪದಕ
Update: 2016-12-21 20:06 IST
ಬಂಟ್ವಾಳ,ಡಿ.21: ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಗುರು ಫಾ| ಮೈಕಲ್ ಲೋಬೊ ಅವರು ಕುವೆಂಪು ವಿಶ್ವವಿದ್ಯಾನಿಲಯ ನಡೆಸಿದ ಮೃದು ಕೌಶಲ್ಯಗಳು (ಸಾಫ್ಟ್ ಸ್ಕಿಲ್ಸ್) ಪದ್ಯುತ್ತರ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಗಳಿಸಿ ಚಿನ್ನದ ಪದಕ ಪಡೆದಿರುತ್ತಾರೆ.
ಅವರು ಉದ್ಯಾವರ,ಮೊಡಂಕಾಪು,ಬೋಂದೆಲ್ ಧರ್ಮಕೇಂದ್ರಗಳಲ್ಲಿ ಸಹಾಯಕ ಧರ್ಮಗುರುಗಳಾಗಿ ಬಾಂಬಿಲಪದವು, ಹಿರ್ಗಾನ,ಕಡಬ ಧರ್ಮಕೇಂದ್ರಗಳಲ್ಲಿ ಧರ್ಮಗುರುಗಳಾಗಿ,ಪುತ್ತೂರು ಸಂತ ಫಿಲೋಮಿನ ಕಾಲೇಜು,ಲೂರ್ಡ್ಸ್‌ಸೆಂಟ್ರಲ್ ಸ್ಕೂಲ್ ಬಿಜೈಯಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಬಹುಮುಖ ಪ್ರತಿಭೆಯ ಅವರು ಉತ್ತಮ ಸಂಘಟಕ,ಸಂಗೀತಗಾರ ಹಾಗೂ ವಾಗ್ಮಿಗಳಾಗಿದ್ದಾರೆ. ಡಿ.23ರಂದು ಶಿವಮೊಗ್ಗ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.