ಕೆಎಸ್ಸಾರ್ಟಿಸಿ ಬಸ್‌ಪಾಸ್ ದರ ಇಳಿಕೆ
Update: 2016-12-21 20:32 IST
ಮಂಗಳೂರು, ಡಿ.21: ಕರ್ನಾಟಕ ರಾಜ್ಯರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗದಿಂದ ಪುತ್ತೂರು-ಮಂಗಳೂರು/ಸ್ಟೇಟ್‌ಬ್ಯಾಂಕ್ ಮಧ್ಯೆ ಓಡುವ ಲಿ. ಸ್ಟಾಪ್ ಸಾರಿಗೆಗಳಲ್ಲಿ ದಿನನಿತ್ಯ ಪ್ರಯಾಣಿಸುತ್ತಿರುವ ಪ್ರಯಾಣಿಕರ ಅನುಕೂಲಕ್ಕಾಗಿ ಮಾಸಿಕ ಸೀಸನ್ ಬಸ್‌ಪಾಸುಗಳ ದರಗಳಲ್ಲಿ ಭಾರೀ ಇಳಿಕೆ ಮಾಡಲಾಗಿದೆ.
ಪುತ್ತೂರು - ಮಂಗಳೂರು 1,540 ರೂ., ಪುತ್ತೂರು - ಬಿಸಿರೋಡ್ 1,120 ರೂ., ಬಿಸಿರೋಡ್ - ಮಂಗಳೂರು 1,100 ರೂ. ಕಲ್ಲಡ್ಕ - ಮಂಗಳೂರು 1,220 ರೂ, ಮಾಣಿ - ಮಂಗಳೂರು -1,300 ರೂ.
ದಿನನಿತ್ಯ ಪ್ರಯಾಣಿಸುತ್ತಿರುವ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.