ಎಸ್.ಎಸ್.ಎಫ್ ವಾರ್ಷಿಕ ಮಹಾಸಭೆ : ನೂತನ ಪದಾಧಿಕಾರಿಗಳ ಆಯ್ಕೆ
ಬಂಟ್ವಾಳ,ಡಿ.21: ಕರ್ನಾಕಟ ರಾಜ್ಯ ಸುನ್ನಿ ಸ್ಟುಡೆಂಟ್ ಫೆಡರೇಶನ್ ಮಂಚಿ ಸೆಕ್ಟರ್ ಇದರ ದ್ವಿತೀಯ ವಾರ್ಷಿಕ ಮಹಾಸಭೆಯು ಮಂಚಿ ಕಯ್ಯೂರು ಸುನ್ನಿ ಮಹಲ್ ಮದ್ರಸದಲ್ಲಿ ನಡೆಯಿತು. ಮಂಚಿ ವಲಯ ಎಸ್.ವೈ.ಎಸ್ ಅಧ್ಯಕ್ಷ ಅಬೂಬಕರ್ ಲತೀಫಿ ಎಣ್ಮೂರು ಉದ್ಘಾಟಿಸಿದರು. ಎಸ್.ಎಸ್.ಎಫ್ ಮಂಚಿ ವಲಯ ಅಧ್ಯಕ್ಷ ರಫೀಕ್ ಝುಹ್‌ರಿ ಅಧ್ಯಕ್ಷತೆ ವಹಿಸಿದರು. ಎಸ್.ಎಸ್.ಎಫ್ ಬಂಟ್ವಾಳ ಡಿವಿಷನ್ ಉಪಾಧ್ಯಕ್ಷ ರಶೀದ್ ಹಾಜಿ ವಗ್ಗ ಚುನಾವಣಾ ವೀಕ್ಷಕರಾಗಿ ಹಾಗೂ ಎಸ್.ಎಸ್.ಎಫ್ ಬಂಟ್ವಾಳ ಡಿವಿಷನ್ ಅಧ್ಯಕ್ಷ ಟಿ.ಕೆ.ಇಸ್ಮಾಯಿಲ್ ಸಅದಿ ಸಂಘಟನಾ ತರಬೇತಿಯನ್ನು ವಿವರಿಸಿದರು ನಂತರ 2016-17ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಅಬ್ದುಲ್ ಲತೀಫ್ ಸಅದಿ ಪಂಜಿಕಲ್, ಉಪಾಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಸಅದಿ ಕುಕ್ಕಾಜೆ, ಪ್ರ.ಕಾರ್ಯದರ್ಶಿಯಾಗಿ ಝುಬೈರ್ ಸಂಪಿಲ, ಜೊತೆ ಕಾರ್ಯದರ್ಶಿಯಾಗಿ ಸಿದ್ದೀಕ್ ನೂಜಿ, ನೌಫಲ್ ಕಟ್ಟತ್ತಿಲ ಕೋಶಾಧಿಕಾರಿಯಾಗಿ ಅಬ್ದುಲ್ ಹಮೀದ್ ಮಿತ್ತರಾಜೆ ಹಾಗೂ 21 ಕಾರ್ಯಾಕಾರಿ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಜೊತೆಗೆ ಬಂಟ್ವಾಳ ಎಸ್.ಎಸ್.ಎಫ್ ಬಂಟ್ವಾಳ ಡಿವಿಷನ್ ಕೌನ್ಸಿಲರ್ ಆಗಿ 19 ಸದಸ್ಯರನ್ನು ಆಯ್ಕೆ ಮಾಡಲಾಯಿತು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.