ಮಹಿಳೆಯ ಸರ ಅಪಹರಣ
ಉಡುಪಿ, ಡಿ.21: ಕುಂಜಿಬೆಟ್ಟಿನ ಸುಧೀಂದ್ರತೀರ್ಥ ಮಾರ್ಗದಲ್ಲಿ ಡಿ.20 ರಂದು ಸಂಜೆ ವೇಳೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಕತ್ತಿನಿಂದ ಸರ ಅಪಹರಿಸಿರುವ ಬಗ್ಗೆ ವರದಿಯಾಗಿದೆ.
ಕುಂಜಿಬೆಟ್ಟುವಿನ ಎಲ್‌ಎಲ್‌ಆರ್ ಮಾರ್ಗದ ಮಾಧವ ಅಂಚನ್ ಎಂಬ ವರ ಪತ್ನಿ ಯಶೋದ ಅಂಚನ್(60) ಎಂಬವರು ಕುಂಜಿಬೆಟ್ಟು ಶಾರದಾ ಮಂದಿರದಲ್ಲಿ ಪೂಜೆ ಮುಗಿಸಿ ವಾಪಾಸು ಮನೆಗೆ ಬರುತ್ತಿದ್ದಾಗ ಕಪ್ಪು ಬಣ್ಣದ ಬೈಕಿನಲ್ಲಿ ಅಪರಿಚಿತರಿಬ್ಬರು ಯಶೋದರವರ ಬಳಿ ಬಂದು ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರವನ್ನು ಬಲಾತ್ಕಾರವಾಗಿ ಎಳೆದು ಅರ್ಧ ತುಂಡು ಸರ ದೊಂದಿಗೆ ಪರಾರಿಯಾಗಿದ್ದಾರೆ.
ಕಳವಾದ 18 ಗ್ರಾಂ ಚಿನ್ನದ ಸರದ ಮೌಲ್ಯ ಸುಮಾರು 50 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಸರಗಳ್ಳರು ಸುಮಾರು 30ರಿಂದ 35ವರ್ಷದವ ರಾಗಿದ್ದರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.