×
Ad

ಮಂಗಳೂರು ಆಕಾಶವಾಣಿಯ 40ನೆ ಸಂಸ್ಥಾಪನಾ ದಿನಾಚರಣೆ

Update: 2016-12-21 22:22 IST

ಮಂಗಳೂರು,ಡಿ.21: ಮಂಗಳೂರು ಆಕಾಶವಾಣಿಯ ಮನೋರಂಜನಾ ಸಂಘದ ವತಿಯಿಂದ ಆಕಾಶವಾಣಿಯ 40ನೆ ಸಂಸ್ಥಾಪನಾ ದಿನಾಚರಣೆ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮ ಆಕಾಶವಾಣಿ ಕಚೇರಿ ಆವರಣದಲ್ಲಿ ಬುಧವಾರ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಕೆ.ಜಿ. ಜಗದೀಶ್, ಆಧುನಿಕ ತಂತ್ರಜ್ಞಾನಗಳು ಸಾಕಷ್ಟಿದ್ದರೂ ಉತ್ತಮ ಗುಣಮಟ್ಟವನ್ನು ಹೊಂದಿರುವ ಆಕಾಶವಾಣಿ, ಕಲೆ, ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದರು.

1976ರಲ್ಲಿ ಸ್ಥಾಪನೆಗೊಂಡ ಆಕಾಶವಾಣಿ ಇಂದಿಗೂ ತನ್ನ ಛಾಪು ಉಳಿಸಿಕೊಂಡಿದೆ. ತಂತ್ರಜ್ಞಾನಗಳು ಸಾಕಷ್ಟು ಅಭಿವೃದ್ಧಿಯಾಗಿದ್ದರೂ ರೇಡಿಯೋ ಕೇಳುಗರ ಸಂಖ್ಯೆ ಮಾತ್ರ ಕುಗ್ಗಿಲ್ಲ. ದ.ಕ., ಉಡುಪಿ, ಕಾಸರಗೋಡು ಮತ್ತು ಹೊರಭಾಗದಿಂದ ಒಟ್ಟು 35 ಲಕ್ಷ ಜನರು ಆಕಾಶವಾಣಿ ಕೇಳುಗರಿದ್ದಾರೆ. ಇದಕ್ಕೆ ಆಕಾಶವಾಣಿಯೊಂದಿಗೆ ಜನತೆಗೆ ಅವಿನಾಭಾವ ಸಂಬಂಧವಿರುವುದೇ ಕಾರಣ ಎಂದು ಜಿಲ್ಲಾಧಿಕಾರಿ ಶ್ಲಾಘಿಸಿದರು.

ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ನಿರ್ದೇಶಕ ನರೇಂದ್ರ ಎಲ್. ನಾಯಕ್ , ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಶುಭ ಹಾರೈಸಿದರು.

ಆಕಾಶವಾಣಿ ನಿಲಯ ನಿರ್ದೇಶಕ ಜಿ. ರಮೇಶ್ಚಂದ್ರನ್, ಕಾರ್ಯಕ್ರಮ ಮುಖ್ಯಸ್ಥ ಡಾ. ವಸಂತ ಕುಮಾರ್ ಪೆರ್ಲ, ಮನೋರಂಜನಾ ಸಂಘದ ಕಾರ್ಯದರ್ಶಿ ಡಾ. ಸದಾನಂದ ಪೆರ್ಲ, ಕಾರ್ಯಕ್ರಮ ನಿರ್ವಾಹಕ ಕನ್ಸೆಪ್ಟಾ ಫೆರ್ನಾಂಡೀಸ್ ಮತ್ತಿತರರು ಉಪಸ್ಥಿತರಿದ್ದರು.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News