ಟ್ರಕ್ ದಾಳಿ ಪಾತಕಿ ನಾಪತ್ತೆ : ಜರ್ಮನಿ ಆಂತರಿಕ ಸಚಿವ
ಬರ್ಲಿನ್, ಡಿ. 21: ಬರ್ಲಿನ್‌ನಲ್ಲಿನ ಕ್ರಿಸ್ಮಸ್ ಖರೀದಿ ಮಾರುಕಟ್ಟೆಯೊಂದರ ಮೇಲೆ ಟ್ರಕ್ ಹರಿಸಿ ಹಲವಾರು ಮಂದಿಯನ್ನು ಕೊಂದ ಚಾಲಕ ನಾಪತ್ತೆಯಾಗಿದ್ದಾನೆ ಎಂದು ಜರ್ಮನಿಯ ಆಂತರಿಕ ಸಚಿವ ಥಾಮಸ್ ಡಿ ಮೇಝಿಯರ್ ಮಂಗಳವಾರ ಹೇಳಿದ್ದಾರೆ.
ಅದೇ ವೇಳೆ, ಘಟನೆಗೆ ಸಂಬಂಧಿಸಿ ಬಂಧಿಸಲಾಗಿದ್ದ ವ್ಯಕ್ತಿಯನ್ನು ಪುರಾವೆಗಳ ಕೊರತೆಯ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
‘‘ಹಾಗಾಗಿಯೇ, ದಾಳಿಕೋರ ಈಗಲೂ ತಪ್ಪಿಸಿಕೊಂಡಿದ್ದಾನೆ ಎನ್ನುವುದು ಪ್ರಸಕ್ತ ಸ್ಥಿತಿಗತಿಯಾಗಿದೆ’’ ಎಂದು ಸಚಿವರು ಝಡ್‌ಡಿಎಫ್ ಟೆಲಿವಿಶನ್‌ಗೆ ತಿಳಿಸಿದರು.
ಪೊಲೀಸರು ಕೇವಲ ಒಂದು ಸುಳಿವಿನ ಹಿಂದೆ ಬಿದ್ದಿಲ್ಲ, ಆರಂಭದಿಂದಲೂ ಹಲವು ಸುಳಿವುಗಳ ಜಾಡು ಹಿಡಿದು ಸಾಗುತ್ತಿದ್ದಾರೆ ಎಂದರು.
ಟ್ರಕ್ ಘಟನೆ ದಾಳಿ ಎನ್ನುವುದರಲ್ಲಿ ಈಗ ಯಾವುದೇ ಅನುಮಾನ ಉಳಿದಿಲ್ಲ ಎಂದು ಹೇಳಿದ ಅವರು, ಉದ್ದೇಶ ಮಾತ್ರ ಸ್ಪಷ್ಟವಾಗಿಲ್ಲ ಎಂದರು.
ಕ್ರಿಸ್ಮಸ್‌ಗಾಗಿ ಖರೀದಿ ನಡೆಸಲು ಕಿಕ್ಕಿರಿದು ಸೇರಿದ್ದ ಜನರ ಮೇಲೆ ದುಷ್ಕರ್ಮಿ ತನ್ನ ಬೃಹತ್ ಟ್ರಕ್ಕನ್ನು ಹರಿಸಿದ ಘಟನೆಯಲ್ಲಿ 12 ಮಂದಿ ಮೃತಪಟ್ಟಿದ್ದಾರೆ ಹಾಗೂ ಹಲವಾರು ಮಂದಿ ಗಾಯಗೊಂಡಿದ್ದಾರೆ
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.