ಕರಾವಳಿ ಮಿಲನೋತ್ಸವ-2016 : ಬೆಳ್ತಂಗಡಿ ಪ್ರಥಮ, ಬಂಟ್ವಾಳ ಜೈನ್‌ಮಿಲನ್ ದ್ವಿತೀಯ

Update: 2016-12-21 17:13 GMT

ಮೂಡುಬಿದಿರೆ,ಡಿ.21: ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗದ ಕರಾವಳಿ ಮಿಲನೋತ್ಸವ-2016ರ ಪ್ರಯುಕ್ತ ಮೂಡುಬಿದಿರೆ ಪದ್ಮಾವತಿ ಕಲಾಮಂದಿರದಲ್ಲಿ ನಡೆದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಬೆಳ್ತಂಗಡಿ ಜೈನ ಮಿಲನ್ ಪ್ರಥಮ, ಬಂಟ್ವಾಳ ಯುವ ಜೈನ ಮಿಲನ್ ದ್ವಿತೀಯ ಸ್ಥಾನವನ್ನು ಪಡೆದಿದೆ.

ಮಂಗಳೂರು ಯುವ ಜೈನ್ ಮಿಲನ್ ತೃತೀಯ, ಕಾರ್ಕಳ ಹಾಗೂ ನಾರಾವಿ ಶಿಸ್ತುಬದ್ಧ ಜೈನ್ ಮಿಲನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿವೆ. ಬೆಳ್ತಂಗಡಿ ಜೈನಮಿಲನ್‌ನ ಜಿನ ಪ್ರಸಾದ್ ಜೈನ್ ವೈಯಕ್ತಿಕ ಅತ್ಯುತ್ತಮ ಪ್ರಶಸ್ತಿಯನ್ನು ಪಡೆದಿದ್ದಾರೆ. ದೂರದಿಂದ ಬಂದ ವಗೆಗೆರೆ ಹಾಗೂ ಸಂಸೆ ಜೈನ್ ಮಿಲನ್‌ಗಳನ್ನು ಪುರಸ್ಕರಿಸಲಾಯಿತು.

ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್, ಭಾರತೀಯ ಜೈನ್ ಮಿಲನ್ ವಲಯ 8ರ ಅಧ್ಯಕ್ಷ ಇ.ವಿ ಅಜ್ಜಪ್ಪ, ಕಾರ್ಯಾಧ್ಯಕ್ಷ ಕೆ.ಪ್ರಸನ್ನ ಕುಮಾರ್, ಉಪಾಧ್ಯಕ್ಷ ಡಾ.ಬಿ ಯಶೋವರ್ಮ ಬಹುಮಾನ ಬಹುಮಾನ ವಿತರಿಸಿದರು.

ವಲಯ 8ರ ಉಪಾಧ್ಯಕ್ಷ ಪುಷ್ಪರಾಜ್ ಜೈನ್ ಸಮಾರೋಪ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿದ್ದರು.

ಯುವ ಮಿಲನ್ ವಲಯ 8ರ ಅಧ್ಯಕ್ಷ ಜಿತೇಶ್, ಉದ್ಯಮಿಗಳಾದ ಮಿಥನ್ ಚೌಟ, ಅಭಿಜಿತ್ ಎಂ ಮುಖ್ಯ ಅತಿಥಿಯಾಗಿದ್ದರು.

ವಲಯ 8ರ ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್, ನಿರ್ದೇಶಕ ಜಯರಾಜ್ ಕಂಬಳಿ, ಅತಿಥೇಯ ಮೂಡುಬಿದಿರೆ ಜೈನ್ ಮಿಲನ್ ಅಧ್ಯಕ್ಷ ಎಚ್.ಧನಕೀರ್ತಿ ಬಲಿಪ, ಕಾರ್ಯದರ್ಶಿ ನಮಿರಾಜ್ ಜೈನ್, ಕೋಶಾಧಿಕಾರಿ ಜಿನೇಂದ್ರ ಹೆಗ್ಡೆ ಉಪಸ್ಥಿತರಿದ್ದರು.

ಶ್ರೀಧರ್ ಕಾರ್ಯಕ್ರಮ ನಿರೂಪಿಸಿದರು.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News