×
Ad

ಪ.ಪೂ. ಕಾಲೇಜುಗಳ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ : ಆಳ್ವಾಸ್ ಪ.ಪೂ. ಕಾಲೇಜಿಗೆ 31 ಪದಕ

Update: 2016-12-21 22:57 IST

 ಮೂಡುಬಿದಿರೆ : ಪದವಿಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ, ಕಲಬುರ್ಗಿ ಹಾಗೂ ಶ್ರೀಗುರು ಪ.ಪೂ ಕಾಲೇಜು, ವಿದ್ಯಾಪೀಠ, ಕಲಬುರ್ಗಿ ಇವರ ಆಶ್ರಯದಲ್ಲಿ ಡಿಸೆಂಬರ್ 17 ರಿಂದ 19, 2016 ರವರೆಗೆ ನಡೆದ ಪದವಿಪೂರ್ವ ಕಾಲೇಜುಗಳ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜು 31 ಪದಕ, 14 ಚಿನ್ನದ ಪದಕ, 09 ಬೆಳ್ಳಿ ಪದಕ ಮತ್ತು 08 ಕಂಚಿನ ಪದಕ ಪಡೆಯಿತು. ಬಾಲಕಿಯರ ವಿಬಾಗದಲ್ಲಿ 15 ಅಂಕ ಪಡೆದ ಚೈತ್ರಾ ದೇವಾಡಿಗ ವೈಯಕ್ತಿಕ ಪ್ರಶಸ್ತಿಯನ್ನು ಪಡೆದರು ಹಾಗೂ ರಾಷ್ಟ್ರೀಯ ಕ್ರೀಡಾಕೂಟಕ್ಕೆ 24 ಕ್ರೀಡಾಪಟುಗಳ ಆಯ್ಕೆಯಾಗಿದ್ದಾರೆ. ಬಾಲಕರ ವಿಭಾಗದಲ್ಲಿ ಆಳ್ವಾಸ್ ಪ.ಪೂ. ಕಾಲೇಜಿನ ಪ್ರಜ್ವಲ್ ಮಂದಣ್ಣ(100 ಮೀ, 4x100 ರಿಲೇ - ಪ್ರಥಮ), ಅಮನ್ ಅರುಣ್ (200ಮೀ, 110ಮೀ ಹರ್ಡಲ್ಸ್, 4x100 ರಿಲೇ - ಪ್ರಥಮ, ದ್ವಿತೀಯ, ಪ್ರಥಮ), ಸಂತೋಷ್(800ಮೀ, 1500ಮೀ - ತೃತೀಯ), ಪ್ರಶಾಂತ್ ಕುಮಾರ್ (3000ಮೀ, ಗುಡ್ಡಗಾಡು ಓಟ -ದ್ವಿತೀಯ, ಆರನೇ ಸ್ಥಾನ), ಅಕ್ಷಯ್ ಚೌಹಾಣ್(400ಮೀ ಹರ್ಡಲ್ಸ್, 4x400 ರಿಲೇ - ದ್ವಿತೀಯ,ಪ್ರಥಮ), ಪ್ರದ್ಯಮ್ನ(400ಮೀ ಹರ್ಡಲ್ಸ್, 4x400 –––ರಿಲೇ  ತೃತೀಯ, ಪ್ರಥಮ), ಆಶಿಶ್ (ಗುಂಡು ಎಸೆತ, ಡಿಸ್ಕಸ್ ತ್ರೋ  ಪ್ರಥಮ), ಮನು ಡಿ.ಪಿ.(ಜಾವೆಲಿನ್ ತ್ರೊ  ಪ್ರಥಮ ಸ್ಥಾನ), ಶಾರುಕ್ (ಜಾವೆಲಿನ್ ತ್ರೊ - ದ್ವಿತೀಯ), ಯಮುನೂರಪ್ಪ (ಹ್ಯಾಮರ್ ತ್ರೊ - ಪ್ರಥಮ), ಪ್ರವೀಣ್ (ಹ್ಯಾಮರ್ ತ್ರೊ -ದ್ವಿತೀಯ), ಯೋಗೀಶ್ (ಪೋಲ್‌ವಾಲ್ಟ್- ಪ್ರಥಮ), ಬಸವರಾಜ್ (ಗುಡ್ಡಗಾಡು ಓಟ -ಐದನೇ ಸ್ಥಾನ), 4x100 ರಿಲೇ ಪ್ರಥಮ, 4x400 ––ರಿಲೇ ಪ್ರಥಮ ಹಾಗೂ ಬಾಲಕಿಯರ ವಿಭಾಗದಲ್ಲಿ ಭೂಮಿಕಾ ಡಿ. (400 ಮೀ - ಪ್ರಥಮ), ಜಯಲಕ್ಷ್ಮೀ (1500ಮೀ, ಗುಡ್ಡಗಾಡು ಓಟ  ತೃತೀಯ, ಆರನೇ ಸ್ಥಾನ), ಚೈತ್ರಾ ದೇವಾಡಿಗ (3000ಮೀ, 5000ಮೀ, ಗುಡ್ಡಗಾಡು ಓಟ - ಪ್ರಥಮ), ಅಭಿನಯ ಶೆಟ್ಟಿ(ಎತ್ತರ ಜಿಗಿತ -ಪ್ರಥಮ), ಎಸ್.ಬಿ. ಸುಪ್ರಿಯಾ(ಎತ್ತರ ಜಿಗಿತ -ತೃತೀಯ), ಬಿ.ಎನ್. ತುಂಗಶ್ರೀ (ತ್ರಿವಿಧ ಜಿಗಿತ - ದ್ವಿತೀಯ), ರುಂಜುನ್ ಪೆಗು (ಜಾವೆಲಿನ್ ತ್ರೊ - ದ್ವಿತೀಯ), ಪ್ರಿಯಾ ಎಲ್.ಡಿ. (ಗುಡ್ಡಗಾಡು ಓಟ ಮೂರನೇ ಸ್ಥಾನ), 4x100 ರಿಲೇ ಪ್ರಥಮ, 4x400 ರಿಲೇ ದ್ವಿತೀಯ ಪದಕವನ್ನು ಪಡೆದರು.

      ವಿಜೇತ ಕ್ರೀಡಾಪಟುಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವರವರು ಹಾಗೂ ಪ್ರಾಂಶುಪಾಲರಾದ ರಮೇಶ್ ಶೆಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News