×
Ad

ಯೂಟ್ಯೂಬ್ ಸ್ಟಾರ್ ಆದಂ ಸಾಲಿಹ್ ಅನ್ನು ವಿಮಾನದಿಂದ ಹೊರದಬ್ಬಿದ ಡೆಲ್ಟ ಏರ್‌ಲೈನ್ಸ್

Update: 2016-12-22 14:42 IST

ನ್ಯೂಯಾರ್ಕ್, ಡಿ.22: ಯೂಟ್ಯೂಬ್ ಸ್ಟಾರ್ ಯೆಮನಿ-ಅರಬ್ ವಂಶೀಯ ಆದಂ ಸಾಲಿಹ್ ಅನ್ನು ಡೆಲ್ಟ ಏರ್‌ಲೆನ್ಸ್ ಅರಬ್‌ಭಾಷೆ ಮಾತಾಡಿದ್ದಕ್ಕಾಗಿ ವಿಮಾನದಿಂದ ಹೊರದಬ್ಬಿದೆ. ಡೆಲ್ಟಾ ಅಮೆರಿಕದ ಪ್ರಮುಖ ವಿಮಾನ ಕಂಪೆನಿಯಾಗಿದೆ.

"ನಾನು ತನ್ನ ತಾಯಿಯೊಡನೆ ಅರಬಿಭಾಷೆಯಲ್ಲಿ ಮಾತಾಡುತ್ತಿದ್ದೆ. ಇದಕ್ಕಾಗಿ ವಿಮಾನದಿಂದ ಹೊರದಬ್ಬಲಾಯಿತು" ಎಂದ ಆದಂ ಸಾಲಿಹ್, ಘಟನೆಯ ವೀಡಿಯೊ ಟ್ವಿಟರ್‌ನಲ್ಲಿ ಹಾಕಿ ಡೆಲ್ಟಾ ಏರ್‌ಲೈನ್ಸ್‌ನ್ನು ಬಹಿಷ್ಕರಿಸಲು ಕರೆ ನೀಡಿದ್ದಾರೆ. 2 ಲಕ್ಷಕ್ಕೂ ಅಧಿಕ ಜನರು ರಿಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.

"ಇವರುನಾವು ವಿಶೇಷ ಭಾಷೆ ಮಾತಾಡುತ್ತಿದ್ದೇವೆಂದು ಹೇಳುತ್ತಾರೆ. ನನ್ನ ಗಡ್ಡವನ್ನು ನೋಡಿ ಜನಾಂಗೀಯವಾದಿ ಎಂದು ವಿಮಾನದಲ್ಲಿದ್ದ ಕೆಲವರು ಚಿತ್ರಿಸಿದರು" ಎಂದು ಸಲೆ ಘಟನೆಯನ್ನು ವಿವರಿಸಿದ್ದಾರೆ. ಲಂಡನ್‌ನಿಂದ ನ್ಯೂಯಾರ್ಕ್‌ಗೆ ತೆರಳುವ ವಿಮಾನದಲ್ಲಿ ಘಟನೆ ನಡೆದಿದ್ದು, ಕೆಲವರು ಈವೇಳೆ ಸಾಲಿಹ್ ಅನ್ನು ಬೆಂಬಲಿಸಿದ್ದರು.

ಗಂಟೆಗಟ್ಟಲೆ ತಪಾಸಣೆ ನಡೆಸಿ ಬೇರೆ ವಿಮಾನದಲ್ಲಿ ಪ್ರಯಾಣ ಮುಂದುವರಿಸಲು ಅವಕಾಶ ನೀಡಲಾಯಿತು ಎಂದು ಸಾಲಿಹ್ ತಿಳಿಸಿದ್ದಾರೆ. ಆದರೆ ವಿಮಾನದಲ್ಲಿ ಅನವಶ್ಯಕ ಗಲಾಟೆ ಸಾಲಿಹ್ ಮಾಡಿದ್ದಾರೆ.ಆದ್ದರಿಂದ ವಿಮಾನದಿಂದ ಕೆಳಗಿಳಿಸಲಾಯಿತು ಎಂದು ಡೆಲ್ಟಾ ಏರ್‌ಲೆನ್ಸ್ ಸ್ಪಷ್ಟೀಕರಣನೀಡಿದೆ.

ಅರಬಿಭಾಷೆ ಮಾತಾಡಿದ್ದಕ್ಕೆ ವಿಮಾನ ಪ್ರಯಾಣಿಕರನ್ನು ತಡೆದ ಹಲವು ಘಟನೆಗಳು ಅಮೆರಿಕನ್ ವಿಮಾನಗಳಲ್ಲಿ ಈ ಹಿಂದೆ ನಡೆದಿತ್ತು.ಯುಟ್ಯೂಬ್ ವೀಡಿಯೊಗಳಿಂದ ಜನಪ್ರಿಯನಾದ ಆದಂ ಸಾಲಿಹ್ 22ಲಕ್ಷ ಅಭಿಮಾನಿಗಳನ್ನು ಹೊಂದಿದ್ದಾರೆಂದು ವರದಿಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News