×
Ad

ಉಳ್ಳಾಲ ಮದನಿ ವಿದ್ಯಾ ಸಂಸ್ಥೆಯ 40ನೆ ವರ್ಷೋತ್ಸವ

Update: 2016-12-22 17:06 IST

ಮಂಗಳೂರು, ಡಿ.22: ಉಳ್ಳಾಲ ಅಳೇಕಲದ ಮದನಿ ವಿದ್ಯಾಸಂಸ್ಥೆಯ 40ನೆ ವರ್ಷಾಚರಣೆಯು ಸಂಸ್ಥೆಯ ಅಧ್ಯಕ್ಷ ಹಾಜಿ ಅಬ್ದುರ್ರಶೀದ್‌ರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರಗಿತು.

ಮುಖ್ಯ ಅತಿಥಿಗಳಾಗಿ ಮುಸ್ಲಿಂ ಮಹಿಳಾ ಸಾಹಿತ್ಯ ಸಂಘದ ಅಧ್ಯಕ್ಷೆ ಸಮೀನಾ ಹಫ್ಸಾನ ಭಾಗವಹಿಸಿ ಮಾತನಾಡಿದರು. 40ನೆ ವರ್ಷದ ಸವಿನೆನಪಿಗಾಗಿ ಪ್ರಕಟಿಸಲಾದ ‘ಮದನಿ’ ಸ್ಮರಣ ಸಂಚಿಕೆಯನ್ನು ಸಚಿವ ಯು.ಟಿ. ಖಾದರ್ ಬಿಡುಗಡೆಗೊಳಿಸಿದರು.

ಸಂಸ್ಥೆಯ ಉಪಾಧ್ಯಕ್ಷ ಹಾಜಿ ಯು. ಇಬ್ರಾಹಿಂ ಕಾಸಿಂ, ಸಚಿವ ಯು.ಟಿ. ಖಾದರ್‌ರನ್ನು ಸನ್ಮಾನಿಸಲಾಯಿತು. ಉಪನ್ಯಾಸಕ ಹಬೀಬ್ ರಹ್ಮಾನ್, ಅಧ್ಯಾಪಕ ಪಿ.ಡಿ.ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಉಳ್ಳಾಲ ನಗರ ಸಭೆಯ ಅಧ್ಯಕ್ಷ ಹುಸೈನ್ ಕುಂಞಿಮೋನು ಬಹುಮಾನ ವಿತರಿಸಿದರು.

ಕಾಲೇಜಿನ ಪ್ರಾಚಾರ್ಯ ಹಾಜಿ ಬಿ.ಮೂಸ ವರದಿ ವಾಚಿಸಿದರು. ಹಳೆ ವಿದ್ಯಾರ್ಥಿ ಸಂಘದ ಮುಖ್ಯ ಸಂಯೋಜಕ, ನಿವೃತ್ತ ಅಧ್ಯಾಪಕ ಕಮಲಾಕ್ಷ ಕೆ. ಸಂಸ್ಥೆಯ ಅಭಿವೃದ್ಧಿ ಕಾರ್ಯಯೋಜನೆಯ ಬಗ್ಗೆ ಮಾತನಾಡಿದರು.

ವೇದಿಕೆಯಲ್ಲಿ ಉಳ್ಳಾಲ ನಗರಸಭೆಯ ಸದಸ್ಯರಾದ ಯು.ಎ.ಇಸ್ಮಾಯೀಲ್, ಉದ್ಯಮಿ ಹಸೈನಾರ್ ಯು., ಮುಖ್ಯಶಿಕ್ಷಕ ಇಬ್ರಾಹೀಂ ಪಿ, ಮುಖ್ಯ ಶಿಕ್ಷಕಿಯರಾದ ಮೀರಾ ಜೆ, ಶ್ವೇತಾ ಶೆಟ್ಟಿ, ಆಡಳಿತ ಮಂಡಳಿಯ ಕಾರ್ಯದರ್ಶಿ ಪಂಡಿತ್ ಮುಹಮ್ಮದ್, ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ ಹಾಜಿ ಯು.ಎಸ್.ಅಬೂಬಕರ್, ಕೋಶಾಧಿಕಾರಿ ಹಾಜಿ ಯು.ಪಿ. ಅರಬಿ, ಜೊತೆ ಕಾರ್ಯದರ್ಶಿ ಎ.ಎ. ಖಾದರ್, ಲೆಕ್ಕಪರಿಶೋಧಕರಾದ ಯು.ಎ.ಇಬ್ರಾಹೀಂ, ಯು.ಎಸ್. ಉಮರ್ ಫಾರೂಕ್, ಸದಸ್ಯರಾದ ಯು.ಎಚ್. ಹಸನಬ್ಬ ಉಳಿಯ, ಯು.ಎಸ್.ಅಹ್ಮದ್ ಉಪಸ್ಥಿತರಿದ್ದರು.

 ಹಾಜಿ ಯು.ಟಿ. ಇಕ್ಬಾಲ್ ಅಹ್ಮದ್ ಸ್ವಾಗತಿಸಿದರು. ಸೈಯದ್ ತಾಹಿರ್ ತಂಙಳ್ ವಂದಿಸಿದರು. ಉಪನ್ಯಾಸಕ ಇಸ್ಮಾಯೀ ಟಿ. ಕಾರ್ಯಕ್ರಮ ನಿರೂಪಿಸಿದರು.

ಸಭಾಕಾರ್ಯಕ್ರಮದ ಬಳಿಕ ಹಿರಿಯ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ವಿಭಾಗ, ಬ್ರೈಟ್ ಮದನಿ ಪೂರ್ವ ಪ್ರಾಥಮಿಕ ಆಂಗ್ಲಮಾಧ್ಯಮಗಳ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಹಳೆ ವಿದ್ಯಾರ್ಥಿಗಳಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News