×
Ad

ಕೊಂಕಣಿ ಕಾರ್ಯಕ್ರಮಕ್ಕೆ ಅವಕಾಶ

Update: 2016-12-22 17:18 IST

ಮಂಗಳೂರು, ಡಿ.22: ಫೆ.10ರಂದು ನಗರದ ಪುರಭವನದಲ್ಲಿ ನಡೆಯುವ ಕೊಂಕಣಿ ಲೋಕೋತ್ಸವದಲ್ಲಿ ಪ್ರಾಥಮಿಕ/ಪ್ರೌಢ ಶಾಲೆಗಳಿಂದ ಸಾಂಸ್ಕೃತಿಕ ಪ್ರದರ್ಶನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

  ಪ್ರತಿ ತಂಡದವರು 15 ನಿಮಿಷದ ಅವಧಿಯೊಳಗೆ ಒಂದು ಪದ್ಯ (4 ನಿಮಿಷ), ಸಮೂಹ ನೃತ್ಯ (4 ನಿಮಿಷ), ಹಾಗೂ ನೃತ್ಯ ರೂಪಕ (7 ನಿಮಿಷ) ಕಾರ್ಯಕ್ರಮ ನೀಡಬೇಕು. ಮೊದಲು ಸಂಪರ್ಕಿಸುವ 12 ತಂಡಗಳಿಗೆ ಮಾತ್ರ ಅವಕಾಶ. ಆಸಕ್ತರು ಜ.10ರೊಳಗೆ ಕೊಂಕಣಿ ಅಕಾಡಮಿಯ ಕಚೇರಿಗೆ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News