×
Ad

ನಾಳೆ ಕರಾವಳಿ ಉತ್ಸವಕ್ಕೆ ಚಾಲನೆ

Update: 2016-12-22 19:33 IST

ಮಂಗಳೂರು, ಡಿ.22: ಕರಾವಳಿ ಉತ್ಸವ ಮೈದಾನ, ಕದ್ರಿ ಉದ್ಯಾನವನ, ಪಣಂಬೂರ್ ಕಡಲ ಕಿನಾರೆಯಲ್ಲಿ ಜ.1ರವರೆಗೆ ನಡೆಯಲಿರುವ ದ.ಕ. ಜಿಲ್ಲಾ ಕರಾವಳಿ ಉತ್ಸವಕ್ಕೆ ಡಿ.23ರಂದು ಚಾಲನೆ ಸಿಗಲಿದೆ.

ಕರಾವಳಿ ಉತ್ಸವದ ವಸ್ತು ಪ್ರದರ್ಶನದ ಉದ್ಘಾಟನೆಯನ್ನು ಸಂಜೆ 4 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ನೆರವೇರಿಸುವರು. ಕರಾವಳಿ ಉತ್ಸವದ ಮೆರವಣಿಗೆಯನ್ನು ಕರಾವಳಿ ಉತ್ಸವ ಮೈದಾನದಿಂದ ಕದ್ರಿ ಉದ್ಯಾನವನದವರೆಗೆ ನಡೆಯುವ ಮೆರವಣಿಗೆಯನ್ನು ಸಂಜೆ 4:30ಕ್ಕೆ ಸಚಿವ ಯು.ಟಿ. ಖಾದರ್ ನೆರವೇರಿಸುವರು. ಕರಾವಳಿ ಉತ್ಸವಕ್ಕೆ ಸಂಜೆ 6 ಗಂಟೆಗೆ ಅಂತಾರಾಷ್ಟ್ರೀಯ ಖ್ಯಾತಿಯ ಸಂಗೀತ ಕಲಾವಿದರು ಡಾ. ಕದ್ರಿ ಗೋಪಾಲ್‌ನಾಥ್ ಕದ್ರಿ ಉದ್ಯಾನವನದಲ್ಲಿ ಚಾಲನೆ ನೀಡುವರು

ಡಿ.23ರಂದು ಸಂಜೆ 7ರಿಂದ 9ರವರೆಗೆ ಪ್ರಸಿದ್ಧ ಹಿನ್ನಲೆ ಗಾಯಕ ಅಜಯ್ ವಾರಿಯಾರ್, ಸಹನಾ ಭಾರದ್ವಾಜ್ ಬೆಂಗಳೂರು ತಂಡದಿಂದ ಮಧುರಗೀತೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News