ಮಲ್ಪೆ ಹಳೆ ವಿದ್ಯಾರ್ಥಿ ಸಂಘದಿಂದ ಗುರುವಂದನೆ
ಮಲ್ಪೆ, ಡಿ.22: ಮಲ್ಪೆ ಸರಕಾರಿ ಹಿರಿಯ ಪ್ರಾಥಮಿಕ ಮತ್ತು ಕಿರಿಯ ಮಹಾವಿದ್ಯಾಲಯ(ಫಿಶರೀಶ್) ಶಾಲಾ ಹಳೆವಿದ್ಯಾರ್ಥಿ ಸಂಘದ ವತಿ ಯಿಂದ ಗುರುವಂದನಾ ಕಾರ್ಯಕ್ರಮವು ಮಲ್ಪೆ ಏಳೂರು ಮೊಗವೀರ ಭವನದ ಮತ್ಸ್ಯನಿಧಿ ಸಭಾಂಗಣದಲ್ಲಿ ಮಂಗಳವಾರ ಜರಗಿತು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸಾಧು ಸಾಲ್ಯಾನ್ ವಹಿಸಿದ್ದರು. ಮತ್ಸ್ಯೋದ್ಯಮಿ ಶೇಖರ್ ಜಿ.ಕೋಟ್ಯಾನ್, ಮಲ್ಪೆ ಏಳೂರು ಮೊಗವೀರ ಮಹಾಜನ ಸಂಘದ ಉಪಾಧ್ಯಕ್ಷ ಗುಂಡು ಬಿ. ಅಮೀನ್ ಮಾತನಾಡಿದರು.
ಉದ್ಯಮಿ ಪ್ರಖ್ಯಾತ್ ಶೆಟ್ಟಿ ತೆಂಕನಿಡಿಯೂರು, ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲ ರಾಮಚಂದ್ರ ಐತಾಳ್, ಪ್ರೌಢಶಾಲಾ ಹಿರಿಯ ಸಹಶಿಕ್ಷಕಿ ವಿನೋದ ಎಂ., ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾ ಯಿನಿ ಇಂದಿರಾ, ಸಂಘದ ಪ್ರಧಾನ ಕಾರ್ಯದರ್ಶಿ ಶಿವರಾಮ್ ಕಲ್ಮಾಡಿ ಉಪಸ್ಥಿತರಿದ್ದರು.
ಕೇಂದ್ರ ಸರಕಾರದ ಬಹು ಉತ್ಪನ್ನ ರಫ್ತುದಾರ ಚಿನ್ನದ ಪ್ರಶಸ್ತಿ ಪಡೆದ ಯಶಸ್ವಿ ಫಿಶ್‌ಮಿಲ್‌ನ ಆಡಳಿತ ನಿರ್ದೇಶಕ ಸಾಧು ಸಾಲ್ಯಾನ್ ಅವರನ್ನು ಸನ್ಮಾನಿಸ ಲಾಯಿತು. ವಿದ್ಯಾಪೋಷಕ, ಸಂಘದ ಗೌರವಾಧ್ಯಕ್ಷ ಗೋಪಾಲ ಸಿ. ಬಂಗೇರ ಅವರನ್ನು ಗೌರವಿಸಲಾಯಿತು. ಪಿಯುಸಿ ಮತ್ತು ಎಸ್ಸೆಸೆಲ್ಸಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ವಿತರಿಸಲಾಯಿತು.
ಸಂಘದ ನಿಕಟಪೂರ್ವ ಅಧ್ಯಕ್ಷ ಎಂ.ಆನಂದರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಸುರೇಶ್ ಬಿ.ಕರ್ಕೇರ ಸ್ವಾಗತಿಸಿದರು. ಕೋಶಾಧಿಕಾರಿ ಎಂ.ಮಹೇಶ್ ಬಂಗೇರ ವಂದಿಸಿದರು. ಲಕ್ಷ್ಮಣ ಮೈಂದನ್ ಕಾರ್ಯ ಕ್ರಮ ನಿರೂಪಿಸಿದರು.