ಅಲೆಪ್ಪೊ: ಈಗಲೂ ಸಾವಿರಾರು ನಾಗರಿಕರು, ಬಂಡುಕೋರರು ಬಾಕಿ

Update: 2016-12-22 15:00 GMT

ಅಮ್ಮಾನ್, ಡಿ. 22: ಸಿರಿಯದ ಅಲೆಪ್ಪೊ ನಗರದಲ್ಲಿ ಉಳಿದ ಕೊನೆಯ ಬಂಡುಕೋರ ನೆಲೆಯಲ್ಲಿ ಗುರುವಾರ ಸಾವಿರಾರು ಬಂಡುಕೋರರು ಮತ್ತು ಹೋರಾಟಗಾರರು ಹೊರಹೋಗಲು ಕಾಯುತ್ತಿದ್ದಾರೆ. ಆದರೆ, ಅಂತಿಮ ಹಂತದ ತೆರವು ಕಾರ್ಯಾಚರಣೆಗೆ ಕಠಿಣ ಹವಾಮಾನ ಸೇರಿದಂತೆ ವಿವಿಧ ಆತಂಕಗಳು ಎದುರಾಗಿವೆ ಎಂದು ಬಂಡುಕೋರ ವಕ್ತಾರರೊಬ್ಬರು ಹೇಳಿದ್ದಾರೆ.

ಜನರು ‘ಭಾರೀ ಸಂಖ್ಯೆಯಲ್ಲಿ’ ಅಲೆಪ್ಪೊದಲ್ಲಿ ಉಳಿದಿದ್ದಾರೆ, ಆದರೆ ಎಷ್ಟು ಜನರಿದ್ದಾರೆ ಎಂದು ಲೆಕ್ಕ ಹಾಕುವುದು ಕಷ್ಟ ಎಂದು ಬಂಡುಕೋರ ಗುಂಪು ಅಹ್ರಾರ್ ಅಲ್ ಶಾಮ್‌ನ ವಕ್ತಾರ ಅಹ್ಮದ್ ಕರ ಅಲಿ ರಾಯ್ಟರ್ಸ್ ತಿಳಿಸಿದರು. ಜನರು ಈಗಲೂ ಸಾವಿರಾರು ಸಂಖ್ಯೆಯಲ್ಲಿ ಅಲೆಪ್ಪೊದಲ್ಲಿ ಇದ್ದಾರೆ ಎಂದರು.

ಕಳೆದ ವಾರದಿಂದ ಈಗಾಗಲೇ ಸಾವಿರಾರು ಬಂಡುಕೋರರು ಮತ್ತು ನಾಗರಿಕರನ್ನು ಬಂಡುಕೋರ ನಿಯಂತ್ರಣದ ಪೂರ್ವ ಅಲೆಪ್ಪೊದಿಂದ ಹೊರತರಲಾಗಿದೆ. ಆದರೆ, ಕೊನೆಯ ಗುಂಪಿನ ನಿರ್ಗಮನದ ವೇಳೆ ಅಡೆತಡೆಗಳು ಎದುರಾಗಿವೆ.

ಬಂಡುಕೋರರು ಮತ್ತು ಇರಾನ್ ಬೆಂಬಲಿತ ಹೋರಾಟಗಾರರು ವಿಳಂಬಕ್ಕಾಗಿ ಪರಸ್ಪರರನ್ನು ದೂರುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News