ಅಕ್ರಮವಾಗಿ ಸಾಗಿಸುತ್ತಿದ್ದ 2 ಟನ್ ದಂತ ವಶ
Update: 2016-12-22 20:39 IST
ಮೊಂಬಾಸ (ಕೆನ್ಯ), ಡಿ. 22: ಕೆನ್ಯದ ಅಧಿಕಾರಿಗಳು ಹಡಗೊಂದರಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ ಸುಮಾರು ಎರಡು ಟನ್ (2000 ಕೆಜಿ) ದಂತವನ್ನು ವಶಪಡಿಸಿಕೊಂಡಿದ್ದಾರೆ.
ಹಡಗಿನಲ್ಲಿ ಅಕ್ರಮ ಸರಕಿದೆ ಎಂಬ ಗುಪ್ತಚರ ವರದಿಯ ಹಿನ್ನೆಲೆಯಲ್ಲಿ ಕಾಂಬೋಡಿಯಕ್ಕೆ ಹೋಗುತ್ತಿದ್ದ ಹಡಗನ್ನು ಹಿಂದಕ್ಕೆ ಕರೆಸಿಕೊಂಡು ದಾಳಿ ನಡೆಸಲಾಯಿತು ಎಂದು ತೆರಿಗೆ ಅಧಿಕಾರಿಗಳು ತಿಳಿಸಿದರು.
ಎರಡು ಮಿಲಿಯ ಡಾಲರ್ (ಸುಮಾರು 14 ಕೋಟಿ ರೂಪಾಯಿ) ವೌಲ್ಯದ 1.97 ಟನ್ ದಂತವನ್ನು ಹಡಗಿನ ಮರದ ಹಲಗೆಗಳ ನಡುವಿನ ಖಾಲಿ ಜಾಗದಲ್ಲಿ ಅಡಿಗಿಸಿಡಲಾಗಿತ್ತು ಹಾಗೂ ಅದನ್ನು ಸಿರಾಮಿಕ್ಸ್ ಎಂಬುದಾಗಿ ಘೋಷಿಸಲಾಗಿತ್ತು ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದರು.
ಕೆನ್ಯದ ಸೂಚನೆಯನ್ನು ಸ್ವೀಕರಿಸಿದ ಸಿಂಗಾಪುರದ ಅಧಿಕಾರಿಗಳು ಹಡಗನ್ನು ಮೊಂಬಾಸಕ್ಕೆ ಹಿಂದೆ ಕಳುಹಿಸಿದರು.