×
Ad

ಬಿಎಸ್ಸೆನ್ನೆಲ್ ಫುಟ್ಬಾಲ್ ಪಂದ್ಯ : ಕೇರಳ ತಂಡವನ್ನು ಮಣಿಸಿದ ಮಹಾರಾಷ್ಟ್ರ ತಂಡ

Update: 2016-12-22 20:41 IST

ಮಂಗಳೂರು, ಡಿ.22 : ಬಿಎಸ್ಸೆನ್ನೆಲ್‌ನ 16 ನೆ ವರ್ಷದ ಅಖಿಲ ಭಾರತ ಫುಟ್ಬಾಲ್ ಸ್ಪರ್ಧೆಯಲ್ಲಿ ಕೇರಳ ತಂಡವನ್ನು 0-1 ಗೋಲುಗಳಿಂದ ಮಣಿಸುವ ಮೂಲಕ ಮಹಾರಾಷ್ಟ್ರ ತಂಡ ಟ್ರೋಫಿಯನ್ನು ಗೆದ್ದುಕೊಂಡಿತು.

ಗುರುವಾರ ಮಂಗಳೂರಿನ ನೆಹರೂ ಮೈದಾನದಲ್ಲಿ ಜರಗಿದ ಸಮಾರೋಪಕ್ಕೆ ಮುನ್ನ ಜರಗಿದ ಪಂದ್ಯದಲ್ಲಿ ಮಹಾರಾಷ್ಟ್ರ ತಂಡದ ಆಟಗಾರ ಮುನೀರ್ ಶೇಖ್ ಗೋಲು ಹೊಡೆಯವ ಮೂಲಕ ತಂಡ  ಗೆಲುವು ಸಾಧಿಸಿತು. ತಮಿಳುನಾಡು ತಂಡ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಸಮಾರೋಪ ಸಮಾರಂಭವನ್ನುದ್ದೇಶಿಸಿ ಕರ್ನಾಟಕ ದೂರ ಸಂಪರ್ಕ ವೃತ್ತದ ಮುಖ್ಯ ಮಹಾಪ್ರಬಂಧಕ ಹಾಗೂ ಕರ್ನಾಟಕ ವೃತ್ತ ಕ್ರೀಡೆ ಮತ್ತು ಸಾಂಸ್ಕೃತಿಕ ಬೋರ್ಡ್‌ನ ಅಧ್ಯಕ್ಷ ಪಿ.ನಾಗರಾಜು ಮಾತನಾಡಿದರು.

ವೇದಿಕೆಯಲ್ಲಿ ದೆಹಲಿ ಬಿಎಸ್ಸೆನ್ನೆಲ್ ಘಟಕದ ಡಿಜಿಎಂ ಮಯಾಂಕ ಮಿಶ್ರ, ಕರ್ನಾಟಕ ವೃತ್ತದ ಡಿಜಿಎಂ ಎಂ.ಗಣಪತಿ ಭಟ್, ಹುಬ್ಬಳ್ಳಿ-ಧಾರಾವಾಡ ವಿಭಾಗ ಸಂಸ್ಥೆಯ ಪ್ರಬಂಧಕ ವಿವೇಕ್ ಜಯಸ್ವಾಲ್, ಪಂದ್ಯಾಟ ಸಮಿತಿಯ ಪ್ರಮುಖರಾದ ಡಿ.ಎಂ. ಅಸ್ಲಾಂ, ುಟ್ಬಾಲ್ ಪಂದ್ಯಾಟ ಮುಖ್ಯರೆಫ್ರಿ ಶ್ರೀಧರನ್ ಉಪಸ್ಥಿತರಿದ್ದರು.

ದ.ಕ. ಜಿಲ್ಲಾ ದೂರಸಂಪರ್ಕ ವಿಭಾಗದ ಪ್ರಬಂಧಕ ಜಿ.ಕೆ. ರವಿ ಸ್ವಾಗತಿಸಿದರು.

9 ತಂಡಗಳು: ಕರ್ನಾಟಕ, ಮಹಾರಾಷ್ಟ್ರ, ಕೇರಳ, ರಾಜಸ್ತಾನ, ತಮಿಳುನಾಡು, ಜಾರ್ಖಂಡ್, ಜಮ್ಮು-ಕಾಶ್ಮೀರ, ದೆಹಲಿ ಹಾಗೂ ಪಂಜಾಬ್ ರಾಜ್ಯಗಳ 9 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿತ್ತು.

ಸನ್ಮಾನ : ಸಮಾರೋಪ ಸಮಾರಂಭದಲ್ಲಿ ಬಿಎಸ್ಸೆನ್ನೆಲ್ ಕೋಡಿಕಲ್ ಘಟಕದ ಉದ್ಯೋಗಿಯಾಗಿರುವ ಅಂತಾರಾಷ್ಟ್ರೀಯ ಕ್ರೀಡಾಪಟು ವಿಕಾಸ್‌ಪುತ್ರನ್, ಬಿಎಸ್ಸೆನ್ನೆಲ್ ಸಂಸ್ಥೆಯ ಅಧಿಕಾರಿಗಳ ಪುತ್ರಿಯಾಗಿರುವ ಸಂಗೀತ ಕಲಾವಿದೆ ಸಹನಾ ಭಾರದ್ವಾಜ್ ಹಾಗೂ ನಿವೃತ್ತ ಉದ್ಯೋಗಿ ಹಾಗೂ ಮಾಜಿ ುಟ್ಬಾಲ್ ಆಟಗಾರ 75 ರ ಹರೆಯದ ಲೋಕನಾಥ ಅವರನ್ನು ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News