×
Ad

ಮೇಯರ್ ವಿರುದ್ಧ ಮುಸ್ಲಿಮ್ ವಿರೋಧಿ ಹೇಳಿಕೆಗಳಿಗಾಗಿ ದ್ವೇಷಾಪರಾಧ ಮೊಕದ್ದಮೆ

Update: 2016-12-22 20:49 IST

ಪ್ಯಾರಿಸ್, ಡಿ. 22: ತನ್ನ ನಗರದಲ್ಲಿರುವ ಮುಸ್ಲಿಮ್ ವಿದ್ಯಾರ್ಥಿಗಳ ಸಂಖ್ಯೆಯು ‘ಸಮಸ್ಯೆ’ಯಾಗಿದೆ ಎನ್ನುವುದು ಸೇರಿದಂತೆ ಹಲವು ವಿವಾದಾಸ್ಪದ ಹೇಳಿಕೆಗಳನ್ನು ನೀಡಿರುವ ದಕ್ಷಿಣ ಫ್ರಾನ್ಸ್‌ನ ನಗರ ಬೆಝೀರ್ಸ್‌ನ ಮೇಯರ್ ವಿರುದ್ಧ ದ್ವೇಷಾಪರಾಧ ಮೊಕದ್ದಮೆ ದಾಖಲಿಸಲಾಗಿದೆ.

ಫ್ರಾನ್ಸ್‌ನ ಬಲಪಂಥೀಯ ಪಕ್ಷ ನ್ಯಾಶನಲ್ ಫ್ರಂಟ್‌ನ ರಾಬರ್ಟ್ ಮೆನಾರ್ಡ್, ದ್ವೇಷಾಪರಾಧವನ್ನು ಪ್ರಚೋದಿಸಿದ ಅಥವಾ ತಾರತಮ್ಯ ನಡೆಸಿದ ಆರೋಪದಲ್ಲಿ ಪ್ಯಾರಿಸ್‌ನ ನ್ಯಾಯಾಲಯವೊಂದರಲ್ಲಿ ವಿಚಾರಣೆ ಎದುರಿಸಲಿದ್ದಾರೆ.

‘‘ನನ್ನ ನಗರದ ಮಧ್ಯ ಭಾಗದ ಶಾಲೆಯಲ್ಲಿರುವ ತರಗತಿಯೊಂದರಲ್ಲಿ 91 ಶೇಕಡ ವಿದ್ಯಾರ್ಥಿಗಳು ಮುಸ್ಲಿಮರು. ಸಹಜವಾಗಿಯೇ, ಇದೊಂದು ಸಮಸ್ಯೆಯಾಗಿದೆ. ಸಹನೆಗೂ ಒಂದು ಮಿತಿಯಿದೆ’’ ಎಂಬುದಾಗಿ ಮೇಯರ್ ಸೆಪ್ಟಂಬರ್‌ನಲ್ಲಿ ಫ್ರಾನ್ಸ್‌ನ ವಾರ್ತಾ ಚಾನೆಲ್ ‘ಎಲ್‌ಸಿಐ’ಗೆ ಹೇಳಿಕೆ ನೀಡಿದ್ದರು.
ಮೆನಾರ್ಡ್ ಅಕ್ಟೋಬರ್‌ನಲ್ಲಿ ವಲಸಿಗ ವಿರೋಧಿ ಪೋಸ್ಟರ್‌ಗಳನ್ನು ಹಾಕುವ ಮೂಲಕ ವಿವಾದಕ್ಕೆ ಕಾರಣವಾಗಿದ್ದರು ಹಾಗೂ ತನ್ನ ನಗರಕ್ಕೆ ವಲಸಿಗರು ಬರುವ ಮುನ್ನ ಸ್ಥಳೀಯವಾಗಿ ಜನಮತಗಣನೆ ನಡೆಯಬೇಕು ಎಂಬುದಾಗಿ ಕರೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News