ಕೊಂಕಣ ರೈಲ್ವೇ ವಲಯದ ಸಾಮರ್ಥ್ಯ ವೃದ್ಧಿಗೆ 4500 ಕೊಟಿ ರೂ. ಯೋಜನೆ : ಸಂಜಯ್ ಗುಪ್ತಾ
ಮಂಗಳೂರು,ಡಿ.22:ಭಾರತ ಸರಕಾರದ ಅಧೀನ ಸಂಸ್ಥೆಯಾದ ಕೊಂಕಣ ರೈಲ್ವೇ ಕಾರ್ಪೊರೇಶನ್ ಲಿಮಿಟೆಡ್‌ನ ವತಿಯಿಂದ ಕೊಂಕಣ ರೈಲ್ವೇ ವಲಯದ ಸಾಮರ್ಥ್ಯ ವೃದ್ಧಿಗೆ 4500 ಕೋಟಿ ರೂ ಯೋಜನೆ ಹಾಗೂ ಇತರ ಅಭಿವೃದ್ಧಿ ಯೋಜನೆಗಳನ್ನು ಗಳನ್ನು ಹಮ್ಮಿಕೊಳ್ಳಲಾಗಿದೆ .ಹೊಸದಾಗಿ 10 ನೂತನ ರೈಲು ನಿಲ್ದಾಣಗಳ ನ್ನು ಆರಂಭಿಸಲು ಶಿಲಾನ್ಯಾಸ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಸಂಜಯ್ ಗುಪ್ತಾ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಕೊಂಕಣ ರೈಲ್ವೇ ವತಿಯಿಂದ ಮಹಾರಾಷ್ಟ್ರದ ರೋಹಾದಿಂದ ಕರ್ನಾಟಕ ಮಂಗಳೂರಿನ ತೋಕೂರು ವರೆಗೆ 740 ಕಿ.ಮೀ ರೈಲ್ವೇ ಹಳಿ ದ್ವಿಗುಣ ಗೊಳಿಸುವ ಯೋಜನೆ ಹೊಂದಲಾಗಿದ್ದು,ಮೊದಲ ಹಂತದಲ್ಲಿ ರೋಹಾ-ವೀರ್ ನಡುವೆ 340 ಕೋಟಿ ರೂ ಹಳಿದ್ವಿಗುಣ ಗೊಳಿಸುವ ಯೋಜನೆಯನ್ನು ಕೈ ಗೆತ್ತಿಕೊಳ್ಳಲಾಗಿದೆ ಎಂದು ಸಂಜಯ್ ಗುಪ್ತಾ ತಿಳಿಸಿದ್ದಾರೆ.ಕೊಂಕಣ ರೈಲ್ವೇ ಹಳಿಯನ್ನು ಸಂಪೂರ್ಣ ವಿದ್ಯುತ್ ಚಾಲಿತ ವ್ಯವಸ್ಥೆಯನ್ನು ಹೊಂದಿರುವ ಹಳಿಯನ್ನಾಗಿ ಪರಿವರ್ತಿಸುವ 710 ಕೋಟಿ ರೂ ಯೋಜನೆಯನ್ನು ಕೈ ಗೆತ್ತಿಕೊಳ್ಳಲಾಗಿದೆ.ಈ ಸಂಬಂಧ ಟೆಂಡರ್ ಪ್ರಕ್ರೀಯೆ ಪೂರ್ಣಗೊಂಡಿದೆ .ಚಿಪ್ಲಾನ್-ಕರಾಡ್ ರೈಲ್ವೇ ಸಂಪರ್ಕ ಯೋಜನೆಗೆ 3200 ಕೋಟಿ ರೂ,ಜೈಗರ್ ದಿಗ್‌ನಿ ರೈಲ್ವೇ ಸಂಪರ್ಕ ಯೋಜನೆಗೆ 775 ಕೋಟಿ ರೂ ವೆಚ್ಚದಲ್ಲಿ ಕಾರ್ಯಗತಗೊಳಿಸಲು ಕ್ರಮ ಕೈ ಗೊಳ್ಳಲಾಗಿದೆ ಹಾಗೂ ರೈಲ್ವೇ ಸಾಮರ್ಥ್ಯ ವೃದ್ಧಿ 4,500 ಕೋಟಿ ರೂ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಈ ಯೋಜನೆಯ ಮೂಲಕ 21 ಹೊಸ ರೈಲ್ವೇ ನಿಲ್ದಾಣಗಳ ನಿರ್ಮಾಣ,147 ದ್ವಿಪಥ ರೈಲ್ವೇ ಹಳಿ ಅಳವಡಿಕೆ,18 ಹೆಚ್ಚುವರಿ ಲೂಪ್ ಲೈನ್ ಅಳವಡಿಸುವ ಯೋಜನೆ ಹೊಂದಲಾಗಿದೆ ಎಂದು ಸಂಜಯ್ ಗುಪ್ತಾ ತಿಳಿಸಿದ್ದಾರೆ.
ನಗದು ರಹಿತ ಪಾವತಿ ವ್ಯವಸ್ಥೆ : ಕೊಂಕಣ ರೈಲ್ವೇ ವಿಭಾಗದ ಎಲ್ಲಾ ಪಿಆರ್‌ಎಸ್ ಕೌಂಟರ್‌ಗಳಲ್ಲಿ ನಗದು ರಹಿತ ಪಾವತಿಗೆ ವ್ಯವಸ್ಥೆ ಮಾಡಲಾಗುವುದು.ಇದುವರೆಗೆ 20ಮೆಶಿನ್‌ಗಳನ್ನು ಅಳವಡಿಸಲಾಗಿದೆ .ಉಡುಪಿಯಲ್ಲಿ ಎಟಿಎಂ ವ್ಯವಸ್ಥೆ ಅಳವಡಿಸಲಾಗಿದೆ ಎಂದು ಸಂಜಯ್ ಗುಪ್ತಾ ತಿಳಿಸಿದ್ದಾರೆ.
ಬಯೋ ಟಾಯಿಲೆಟ್ : ಕೊಂಕಣ ರೈಲ್ವೇಯ ಕಾರವಾರ,ಮುರ್ಡೇಶ್ವರ,ಬೆಂದೂರು ಮುಕಾಂಬಿಕ ರಸ್ತೆ ಬಳಿಕ ನಿಲ್ದಾಣ,ಸುರತ್ಕಲ್ ನಿಲ್ದಾಣಗಳಲ್ಲಿ ಬಯೋ ಟಾಯಿಲೆಟ್ ವ್ಯವಸ್ಥೆಯನ್ನು ಮಾಡಲಾಗುವುದು.ಸುರತ್ಕಲ್,ಬೆಂದೂರು ಮೂಕಾಂಬಿಕ ರಸ್ತೆಬಳಿಯ ರೈಲು ನಿಲ್ದಾಣ ಉಡುಪಿ ಹಾಗೂ ಸುರತ್ಕಲ್ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈ ಗೊಳ್ಳಲಾಗಿದೆ ಎಂದು ಸಂಜಯ್ ಗುಪ್ತಾ ತಿಳಿಸಿದ್ದಾರೆ.
ಎಂಆರ್‌ಪಿಎಲ್ ಪರ್ಯಾಯ ರೈಲ್ವೇ ರಸ್ತೆ: ಕೊಂಕಣ್ ರಸ್ತೆ ರೈಲ್ವೇ ಹಳಿ ಬಳಿ ಎಂಆರ್‌ಪಿಎಲ್ ಗೆ ಸಂಪರ್ಕಿಸಲು ಪರ್ಯಾಯವಾಗಿ ಬದಿಯಲ್ಲಿ ನಿರ್ಮಿಸಲಾಗುವ 82 ಕೋಟಿ ರೂ ಯೋಜನೆಯ ರೈಲ್ವೇ ರಸ್ತೆ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಜನವರಿ ತಿಂಗಳಲ್ಲಿ ಟೆಂಡರ್ ಪ್ರಕ್ರೀಯೆ ಪೂರ್ಣಗೊಂಡು ಮುಂದಿನ ಹದಿನೆಂಟು ತಿಂಗಳಲ್ಲಿ ಹಳಿ ಅಳವಡಿಸುವ ಕಾರ್ಯ ಪೂರ್ಣಗೊಳ್ಳಲಿದೆ.ತೋಕೂರು ಬಳಿ 1.75 ಕೋಟಿ ರೂ ವೆಚ್ಚದಲ್ಲಿ ಸರಕು ಸಾಗಾಟಕ್ಕೆ ಅನುಕೂಲವಾಗುವಂತೆ ಪರ್ಯಾಯ ರೈಲ್ವೇ (ಬದಿಯ )ರಸ್ತೆಯನ್ನು ನಿರ್ಮಿಸಲಾಗುವುದು ಎಂದು ಸಂಜಯ್ ಗುಪ್ತಾ ತಿಳಿಸಿದ್ದಾರೆ.
ರೈಲ್ವೇ ಸುರಕ್ಷತೆಗೆ ಸಂಬಂಧಿಸಿದಂತೆ ಒಂದು ಲಕ್ಷ ಕೋಟಿ ರೂ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.ಈ ಯೋಜನೆಯ ಪ್ರಕಾರ ಲೆವೆಲ್ ಕ್ರಾಸಿಂಗ್‌ಗಳನ್ನು ಕಡಿತಗೊಳಿಸುವುದು,ಅಪಘಾತ ರಹಿತ ವಲಯಗಳನ್ನು ವೃದ್ಧಿಸಲು ಕ್ರಮ ಕೈ ಗೊಳ್ಳಲಾಗಿದೆ.ಸ್ವಚ್ಛ ರೈಲು ಯೋಜನೆಯ ಮೂಲಕ ಶುಚಿತ್ವದ ವ್ಯವಸ್ಥೆ,ಖರ್ಚುಗಳಿಗೆ ಕಡಿತಗೊಳಿಸಲು ಕೊಂಕಣ ರೈಲ್ವೇ ಸುರಂಗ ಮಾರ್ಗಗಳಲ್ಲಿ ಎಲ್‌ಇಡಿ ವಿದ್ಯುತ್ ದೀಪಗಳನ್ನು ಹಾಗೂ ಸೊಲಾರ್ ಶಕ್ತಿಯನ್ನು ಬಳಸಲು ಯೋಜನೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸಂಜಯ್ ಗುಪ್ತಾ ತಿಳಿಸಿದರು.
ಮಂಗಳೂರು ರೈಲ್ವೇ ನಿಲ್ದಾಣದಲ್ಲಿ ಮೂಲ ಭೂತ ಸೌಕರ್ಯ ಹೆಚ್ಚಿಸಬೇಕಾಗಿದೆ.ಹಾಲಿ ಇರುವ ಕಿರಿದಾದ ಪ್ಲಾಟ್ ಪಾರ್ಮ್‌ನಿಂದಾಗಿ ಹೆಚ್ಚು ರೈಲು ನಿಲುಗಡೆಯಾಗಲು ಸಮಸ್ಯೆಯಾಗುತ್ತಿರುವುದರಿಂದ ರೈಲು ಸಂಚಾರದಲ್ಲಿ ವಿಳಂಬವಾಗುವುದು ಹೆಚ್ಚಿನ ರೈಲು ಬರಲು ಸಾಧ್ಯವಾಗದೆ ಇರುವ ಸಮಸ್ಯೆಗಳಿವೆ ಎಂದು ಸಂಜಯ್ ಗುಪ್ತಾ ತಿಳಿಸಿದ್ದಾರೆ.
ಸುದ್ದಿ ಗೊಷ್ಠಿಯಲ್ಲಿ ಕೊಂಕಣ ರೈಲ್ವೇ ನಿಗಮದ ಜನರಲ್ ಮ್ಯಾನೇಜರ್ ಜೊಸೆಫ್ ಜಾರ್ಜ್,ಚೀಫ್ ಇಂಜಿನಿಯರ್ ಗೋಪಾಲರಾಜು,ಚೀಫ್ ಕಮರ್ಶಿಯಲ್ ಮ್ಯಾನೇಜರ್ ಡಿ.ಎಸ್.ಲಿಂಗರಾಜು ಮೊದಲಾದವರು ಉಪಸ್ಥಿತರಿದ್ದರು.