25ರಂದು ಸೀರತ್ ಸೌಹಾರ್ದ ಕೂಟ
Update: 2016-12-22 21:22 IST
ಕಾಪು, ಡಿ.22: ಜಮಾಅತೆ ಇಸ್ಲಾಮೀ ಹಿಂದ್ ಕಾಪು ಘಟಕದ ವತಿ ಯಿಂದ ಸೀರತ್ ಸೌಹಾರ್ದ ಕೂಟ, ಪ್ರವಾದಿ ಮುಹಮ್ಮದ್‌ರ ಜೀವನ ಮತ್ತು ಸಂದೇಶ ಕಾರ್ಯಕ್ರಮವನ್ನು ಡಿ.25ರಂದು ಬೆಳಗ್ಗೆ 10ಗಂಟೆಗೆ ಕಾಪು ಜೇಸಿ ಭವನದಲ್ಲಿ ಆಯೋಜಿಸಲಾಗಿದೆ.
ಮುಖ್ಯ ಅತಿಥಿಗಳಾಗಿ ಪುರಸಭೆ ಸದಸ್ಯ ಅರುಣ್ ಶೆಟ್ಟಿ, ಸೋಲಿಡ್ಯಾರಿಟಿ ಯೂಥ್ ಮೂವ್‌ಮೆಂಟ್‌ನ ರಾಜ್ಯ ಸಲಹಾ ಸಮಿತಿ ಸದಸ್ಯ ಶೌಕತ್ ಅಲಿ, ಪ್ರಾಂಶುಪಾಲ ನೀಲಾನಂದ ನಾಯಕ್ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಅಕ್ಬರ್ ಅಲಿ ವಹಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.