×
Ad

ಸಿರಿಯ ಯುದ್ಧಾಪರಾಧ ತನಿಖಾ ಸಮಿತಿಗೆ ವಿಶ್ವಸಂಸ್ಥೆ ಒಪ್ಪಿಗೆ

Update: 2016-12-22 21:23 IST

ವಿಶ್ವಸಂಸ್ಥೆ, ಡಿ. 22: ಸಿರಿಯದಲ್ಲಿ ನಡೆದ ಯುದ್ಧಾಪರಾಧಗಳಿಗೆ ಪುರಾವೆಯನ್ನು ಸಂಗ್ರಹಿಸುವುದಕ್ಕಾಗಿ ಸಮಿತಿಯೊಂದನ್ನು ರಚಿಸುವ ಪ್ರಸ್ತಾಪಕ್ಕೆ ವಿಶ್ವಸಂಸ್ಥೆಯ ಮಹಾಧಿವೇಶನ ಬುಧವಾರ ಒಪ್ಪಿಗೆ ನೀಡಿದೆ.

ಸುಮಾರು ಆರು ವರ್ಷಗಳ ಯುದ್ಧದ ಅವಧಿಯಲ್ಲಿ ನಡೆದ ದೌರ್ಜನ್ಯಗಳಿಗೆ ಕಾರಣರಾದವರನ್ನು ಶಿಕ್ಷಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನು ಇಟ್ಟಂತಾಗಿದೆ.
ತನಿಖಾ ಸಮಿತಿಯೊಂದನ್ನು ರಚಿಸುವ ನಿರ್ಣಯವೊಂದನ್ನು 193 ದೇಶಗಳ ಮಹಾಧಿವೇಶನವು 105-15 ಮತಗಳ ಅಂತರದಿಂದ ಅಂಗೀಕರಿಸಿತು. 52 ಸದಸ್ಯ ದೇಶಗಳು ಗೈರುಹಾಜರಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News