ಸರಕಾರಿ ಆಸ್ಪತ್ರೆ ಖಾಸಗೀಕರಣ: ಸರ್ಜನ್‌ಗೆ ಮನವಿ
ಉಡುಪಿ, ಡಿ.22: ದಾನಿ ಹಾಜಿ ಅಬ್ದುಲ್ಲಾ ಸಾಹೇಬ್ ದಾನವಾಗಿ ನೀಡಿ ರುವ ಸರಕಾರಿ ಆಸ್ಪತ್ರೆಯ ಜಾಗದಲ್ಲಿ ಖಾಸಗಿಯವರು ಕಟ್ಟಡ ನಿರ್ಮಿಸಲು ಅವಕಾಶ ಕಲ್ಪಿಸಬಾರದು ಎಂದು ಆಗ್ರಹಿಸಿ ಮನವಿ ಹಾಗೂ ಅದಕ್ಕೆ ಸಂಬಂಧಿ ಸಿದ ದಾಖಲೆಯನ್ನು ನಿಯೋಗವೊಂದು ಉಡುಪಿ ಜಿಲ್ಲಾ ಸರ್ಜನ್ ಡಾ. ಮಧುಸೂದನ್ ನಾಯಕ್ ಅವರಿಗೆ ಇಂದು ಸಲ್ಲಿಸಿತು.
ದಾಖಲೆಯಲ್ಲಿ ಯಾವುದೇ ಕಾರಣಕ್ಕೂ ಸರಕಾರಿ ಆಸ್ಪತ್ರೆ ಹೊರತು ಪಡಿಸಿ ಬೇರೆ ಯಾವುದೇ ಉದ್ದೇಶಕ್ಕೆ ಈ ಜಾಗವನ್ನು ಬಳಸಬಾರದೆಂದು ಹಾಜಿ ಅಬ್ದುಲ್ಲರು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆಂದು ಡಾ.ಮಧುಸೂದನ್ ಅವರಿಗೆ ನಿಯೋಗದ ನೇತೃತ್ವ ವಹಿಸಿದ್ದ ಜಮಾಅತೆ ಇಸ್ಲಾಮೀ ಹಿಂದ್‌ನ ರಾಜ್ಯ ಸಲಹಾ ಸಮಿತಿಯ ಸದಸ್ಯ ಅಕ್ಬರ್ ಅಲಿ ಮನದಟ್ಟು ಮಾಡಿದರು.
ಈ ಮನವಿ ಹಾಗೂ ದಾಖಲೆ ಪತ್ರವನ್ನು ಸಂಬಂಧಪಟ್ಟವರಿಗೆ ತಲುಪಿಸ ಲಾಗುವುದು ಎಂದು ಡಾ.ಮಧುಸೂದನ್ ನಾಯಕ್ ತಿಳಿಸಿದರು. ನಿಯೋಗ ದಲ್ಲಿ ಹಾಜಿ ಅಬ್ದುಲ್ಲರ ಸಂಬಂಧಿ ಖುರ್ಷಿದ್, ಮುಸ್ಲಿಮ್ ವೆಲ್‌ಫೇರ್ ಅಸೋಸಿಯೇಶನ್ ಅಧ್ಯಕ್ಷ ಕಲ್ಯಾಣಪುರ ಅಬ್ದುಲ್ ಗಫೂರ್, ರಸೂಲ್ ಸಾಹೇಬ್, ಇಕ್ಬಾಲ್ ಮನ್ನಾ ಉಪಸ್ಥಿತರಿದ್ದರು.