×
Ad

ದೇರಳಕಟ್ಟೆ: ‘ರತ್ನೋತ್ಸವ’-2016 ಉದ್ಘಾಟನೆ

Update: 2016-12-22 23:59 IST

 ಕೊಣಾಜೆ,ಡಿ.22: ತುಳುವರು ತುಳು ಭಾಷೆ ಮಾತನಾಡುವುದರ ಜೊತೆಗೆ ವ್ಯವಹಾರಿಕವಾಗಿ ಕನ್ನಡಕ್ಕೂ ವಿಶೇಷ ಮನ್ನಣೆ ನೀಡಿದ್ದಾರೆ. ಆ ಮೂಲಕ ಭಾಷಾ ಸೌಹಾರ್ದತೆ, ಸಮಾಜದ ಸಾಹಾರ್ದತೆಗೆ ಪೂರಕ ವಾತಾವರಣ ನಿರ್ಮಿಸಿದ್ದಾರೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಎಂ. ಜಾನಕಿ ಬ್ರಹ್ಮಾವರ ಹೇಳಿದರು.

   ಅವರು ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಆಶ್ರಯದಲ್ಲಿ ಗುರುವಾರ ದೇರಳಕಟ್ಟೆಯ ಗ್ರೀನ್‌ಗ್ರೌಂಡ್‌ನಲ್ಲಿ ನಡೆದ ನಾಡು ನುಡಿ ವೈಭವದ ‘ರತ್ನೋತ್ಸವ’-2016 ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಹಿರಿಯ ಸಾಹಿತಿ ವಿಮರ್ಸಕ ಪ್ರೊ. ಅ.ರಾ.ಮಿತ್ರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

   ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ ಕೃಷ್ಣನಿಗೆ ಹೆತ್ತಬ್ಬೆ ಹಾಗೂ ಸಾಕಿದ ತಾಯಿ ಸೇರಿದಂತಡೆ ಇಬ್ಬರು ತಾಯಿ ಇದ್ದ ಹಾಗೆ, ನಮಗೆಲ್ಲರಿಗೂ ಎರಡು ತಾಯಿ ಇದ್ದಾರೆ. ನಮ್ಮ ಮಾತೃಭಾಷೆ ತುಳುವಾದರೂ ರಾಜ್ಯ ಭಾಷೆ ಕನ್ನಡದಲ್ಲೇ ನಮ್ಮ ಬದುಕು. ಹಾಗೆಯೇ ದೇರಳಕಟ್ಟೆ ವಿದದ್ಯಾರತ್ನ ಶಾಲೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಕೊಡುತ್ತಿದೆಯಾದರೂ ಕನ್ನಡ ಸಂಘಟನೆಗಳು, ದೊಡ್ಡ ದೊಡ್ಡ ಜವಬ್ದಾರಿಯುತ ಸಂಸ್ಥೆಗಳಿಗೂ ಮಿಗಿಲಾಗಿ ಬಹಳಷ್ಟು ಸಾಹಿತ್ಯ ಸಾಂಸ್ಕ ೃತಿಕ ಕಾರ್ಯಕ್ರಮ, ಸಮ್ಮೇಳನಗಳನ್ನು ಕನ್ನಡ ಭಾಷೆಯಲ್ಲೇ ನಡೆಸುತ್ತಿರುವುದು ಅಭಿನಂದನೀಯ ಎಂದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಭಾಷೆಯ ಬಗ್ಗೆ ಒಂದು ಬದ್ಧತೆ, ಭಾಷಾ ಶುದ್ಧತೆ ಬೇಕು. ಕನ್ನಡ ಭಾಷೆ ಬಳಕೆಯುಲ್ಲಿ ವಿದ್ವಾಂಸತೆ ಇಲ್ಲದಿದ್ದರೂ ವ್ಯವಹಾರಿಕ ಕ್ಷೇತ್ರದಲ್ಲಿ ಜನಜನಿತವಾದ ಭಾಷೆಯನ್ನಾದರೂ ಆಡುವ ಮೂಲಕ ಕನ್ನಡತನ ಸಾರಬೇಕು ಎಂದರು.

  ಪೆರ್ಮನ್ನೂರು ಸಂತ ಸೆಬೆಸ್ಟಿಯನ್ ಚರ್ಚ್‌ನ ಧರ್ಮಗುರು ರೆ. ಫಾ. ಜೆ.ಬಿ. ಸಲ್ದಾನ ಶುಭಾಂಸನೆಗೈದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷಿ ್ಮ ಗಟ್ಟಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್, ಬಿಜೆಪಿ ಮಂಗಳೂರು ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು, ಬೆಳ್ಮ ಗ್ರಾಮ ಪಂಚಾಯಿತಿ ಸದಸ್ಯ ಮಹಮ್ಮದ್ ಕಬೀರ್ ಡಿ, ಕೊರಗಪ್ಪ ಶೆಟ್ಟಿ, ಟ್ರಸ್ಟ್ ಉಪಾಧ್ಯಕ್ಷ ಮೋಹನ್‌ದಾಸ್ ಶೆಟ್ಟಿ ಹಾಗೂ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ನಯೀಮ್ ಹಮೀದ್ ಉಪಸ್ಥಿತರಿದ್ದರು. ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ನಿರ್ದೇಶಕ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಸ್ವಾಗತಿಸಿದರು. ತೋನ್ಸೆ ಪುಷ್ಕಳ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಸೌಮ್ಯಾ ಆರ್. ಶೆಟ್ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News