ದೇಶ ಹಾಳು ಮಾಡುತ್ತಿದ್ದಾರೆ ಎಂದು ಟ್ರಂಪ್ ಪುತ್ರಿ ಮುಂದೆ ಕಿಡಿಕಾರಿದ ವಕೀಲನನ್ನು ವಿಮಾನದಿಂದ ಕೆಳಗಿಳಿಸಿದ ಸಿಬ್ಬಂದಿ

Update: 2016-12-23 08:42 GMT

ನ್ಯೂಯಾರ್ಕ್,ಡಿ 23: ನಿಯೋಜಿತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಹಾಗೂ ಮಕ್ಕಳನ್ನು ಬ್ರೂಕ್ಲಿನ್‌ನ ವಕೀಲ ಡಾನ್ ಗೋಲ್ಡ್ ಸ್ಟೇನ್ ಎಂಬಾತ ಪ್ರಶ್ನಿಸಿದ್ದಕ್ಕಾಗಿ ಆತನನ್ನು ಜೆಟ್‌ಬ್ಲೇ ವಿಮಾನದಿಂದ ಕೆಳಗಿಳಿಸಿದ ಘಟನೆ ನಿನ್ನೆ ನಡೆದಿದೆ.

ಇವಾಂಕಾ ತಂದೆ ಡೊನಾಲ್ಡ್ ಟ್ರಂಪ್ ಅಮೆರಿಕವನ್ನು ನಾಶಪಡಿಸುತ್ತಾರೆಂದು ಡಾನ್ ಗೋಲ್ಡ್‌ಸ್ಟೈನ್ ಆರೋಪಿಸಿದ್ದು, ನಂತರ ನಿಮ್ಮಂತಹವರು ಸಾರ್ವಜನಿಕ ವಿಮಾನದಲ್ಲೇಕೆ ಬರುತ್ತೀರಿ ಎಂದು ಪ್ರಶ್ನಿಸಿದ್ದಾನೆ. ಹಿಲರಿ ಕ್ಲಿಂಟನ್ ಅಭಿಮಾನಿ ಸ್ಟೇನ್, ಇವಾಂಕಾ ಖಾಸಗಿ ವಿಮಾನದಲ್ಲಿ ಪ್ರಯಾಣಿಸಬೇಕೆಂದು ಹೇಳುತ್ತಿದ್ದೆನ್ನಲಾಗಿದೆ.

ಈತನ ಆರೋಪಕ್ಕೆ ಪ್ರತಿಕ್ರಿಯಿಸದೆ ಇವಾಂಕಾ ಶಾಂತವಾಗಿ ಕುಳಿತ್ತಿದ್ದರು. ಕ್ರಯೇನ್ ಉಪಯೋಗಿಸಿ ಚಿತ್ರಬಿಡುಸುವಂತೆ ತನ್ನ ಮಕ್ಕಳಿಗೆ ಅವರು ಹೇಳುತ್ತಿದ್ದರು. ಇದನ್ನೊಂದು ಸಮಸ್ಯೆಯಾಗಿಸಲು ತಾನು ಬಯಸುವುದಿಲ್ಲ ಎಂದ ಇವಾಂಕಾ ಇದಕ್ಕಾಗಿ ಯಾರನ್ನು ವಿಮಾನದಿಂದ ಕೆಳಗಿಸಬೇಕಾಗಿಲ್ಲ ಎಂದಿದ್ದರು. ರಜಾದಿನ ಕಳೆಯಲು ಇವಾಂಕ ತನ್ನ ಕುಟುಂಬದೊಂದಿಗೆ ಪ್ರಯಾಣ ಹೊರಟಿದ್ದರು. ಸ್ಟೇನ್ ಕಿರಿಕಿರಿ ತಡೆಯಲಾಗದೆ ಜೆಟ್‌ಬ್ಲೇ ಸಿಬ್ಬಂದಿ ಆತನನ್ನು ವಿಮಾನದಿಂದ ಕೆಳಗಿಳಿಸಿದ್ದಾರೆ.

ಘಟನೆ ನಂತರ ಸ್ಟೇನ್ ಪತ್ನಿ ಲಾಸ್ಟೆರ್ ಟ್ರಂಪ್ ಅಧ್ಯಕ್ಷರಾಗಿದ್ದನ್ನು ತನ್ನ ಪತಿ ಶಾಂತ ರೀತಿಯಲ್ಲಿ ಅಸಂತೃಪ್ತಿ ಪ್ರಕಟಿಸಿದ್ದರು, ಆದರೆ ವಿಮಾನದ ಸಿಬ್ಬಂದಿ ತಪ್ಪು ಕಲ್ಪನೆಯಿಂದ ಅವರನ್ನು ಹೊರಹಾಕಿದ್ದಾರೆಂದು ಟ್ವೀಟ್ ಮಾಡಿದ್ದಾರೆ. ಇವಾಂಕಾ ಗೋಲ್ಡ್‌ಸ್ಟೇನ್‌ನ್ನು ವಿಮಾನದಿಂದ ಕೆಳಗಿಳಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ಈ ದೃಶ್ಯವನ್ನು ಲಾಸ್ಟೆರ್ ಟ್ವಿಟರ್‌ನಲ್ಲಿ ಹಾಕಿದ್ದಾರೆ. ತನ್ನ ವರ್ತನೆಯನ್ನು ಇವಾಂಕಾ ಮತ್ತು ಪತ್ನಿ ಲಾಸ್ಟೆರ್ ಸಮರ್ಥಿಸಿದ್ದಕ್ಕೆ ಗೋಲ್ಡ್‌ಸ್ಟೇನ್ ಸಂತೋಷ ವ್ಯಕ್ತಪಡಿಸಿದ್ದಾನೆ.

ವಿಮಾನ ಹೊರಡುವ ಮುಂಚೆ ಸ್ಟೇನ್‌ನನ್ನು ವಿಮಾನದಿಂದ ಅದರ ಸಿಬ್ಬಂದಿಗಳಿಗೆ ಕೆಳಗಿಳಿಸಲು ಸಾಧ್ಯವಾಗಿದೆ. ಇವಾಂಕಾರ ಜೊತೆ ವಿಮಾನದಲ್ಲಿ ಇವಾಂಕರ ಜೊತೆಗಿದ್ದ ಅವರ ರಕ್ಷಣೆಗಾಗಿದ್ದ ಸೀಕ್ರೆಟ್ ಸರ್ವೀಸ್ ಸದಸ್ಯರು ಪ್ರಕರಣದಲ್ಲಿ ಮಧ್ಯಪ್ರವೇಶಿಸಲಿಲ್ಲ. ಪ್ರಕರಣವನ್ನು ನಿಭಾಯಿಸಲು ವಿಮಾನ ಸಿಬ್ಬಂದಿಗೆ ಬಿಟ್ಟುಬಿಟ್ಟಿದ್ದರು. ಜೆಟ್‌ಬ್ಲೇ ವಿಮಾನ ಕಂಪೆನಿ ಒಬ್ಬಗ್ರಾಹಕನನ್ನು ವಿಮಾನದಿಂದ ಕೆಳಗಿಳಿಸಿದ್ದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಆದರೆ ಆತ ವಿಮಾನದಲ್ಲಿ ಎಂತಹ ಪರಿಸ್ಥಿತಿ ನಿರ್ಮಿಸಿರಬಹುದು ಎಂದು ತನ್ನ ಸಿಬ್ಬಂದಿಯನ್ನು ಸರ್ಥಿಸಿಕೊಂಡಿದೆ ವರದಿಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News