×
Ad

ಪಾದರಕ್ಷೆ ಖರೀದಿಸಲು ಅಂಗಡಿಗೆ ಭೇಟಿ ನೀಡಿದ ಪೋಪ್: ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೊ ವೈರಲ್

Update: 2016-12-23 15:08 IST

ವ್ಯಾಟಿಕನ್ ಸಿಟಿ, ಡಿ. 23: ಪೋಪ್ ಫ್ರಾನ್ಸಿಸ್ ಸರಳ ಜೀವನ ಶೈಲಿಗೆ ಹೆಚ್ಚು ಪ್ರಸಿದ್ಧರಾಗಿದ್ದಾರೆ. ಎಲ್ಲಿಗೆ ಪ್ರಯಾಣಿಸಿದರೂ ತನ್ನ ಬ್ಯಾಗನ್ನು ತಾನೇ ತೆಗೆದುಕೊಂಡು ಹೋಗುವ ಪೋಪ್ ಸರಳತೆ ಜನಮನಗೆದ್ದಿದ್ದರು. ಇದೀಗ ಹೊಸ ಪಾದರಕ್ಷೆ ಖರೀದಿಸಲಿಕ್ಕಾಗಿ ಸ್ವತಃ ಅಂಗಡಿ ಹೋಗಿ ಕಾಲುನೋವು ಆರ್ಥೋಪೀಡಿಕ್ ಪಾದರಕ್ಷೆ ಖರೀದಿಸಿದ್ದು,ಹೆಚ್ಚು ಚರ್ಚೆಗೊಳಗಾಗಿದೆ.

ಪೋಪ್ ಅಂಗಡಿಗೆ ಬಂದಿದ್ದನ್ನು ತಿಳಿದು ಅಂಗಡಿ ಮುಂದೆ ಜನ ಸಂದಣಿ ನೆರೆಯಿತು. ಕೆಲವರು ಅವರ ಜೊತೆ ನಿಂತು ಫೋಟೊ ಕ್ಲಿಕ್ಕಿಸಿಕೊಂಡರು. ಕೆಲವರು ಪೋಪ್ ಚಪ್ಪಲಿ ಖರೀದಿಸುತ್ತಿದ್ದ ದೃಶ್ಯ ಸೆಲ್ಫಿ ಕ್ಲಿಕ್ಕಿಸಿದರು. ಪೋಪ್ ಚಪ್ಪಲಿ ಖರೀದಿಸಿ ಅಂಗಡಿಯಾತನನ್ನು ಹರಸಿ ಪೋಪ್ ಮರಳಿದ್ದಾರೆ.

ಪೋಪ್ ಚಪ್ಪಲಿ ಖರೀದಿಸುತ್ತಿದ್ದ ದೃಶ್ಯಗಳನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು ಅತ್ಯಂತ ವೇಗವಾಗಿ ವೈರಲ್‌ಆಗಿದೆ. ಪೋಪ್‌ರನ್ನು ರೋಮ್ ಮೇಯರ್ ಮಾಡಬೇಕೆಂದು ಕೆಲವರು ಬೇಡಿಕೆ ಇಟ್ಟಿದ್ದಾರೆ. ಪೋಪ್ 2015ರಲ್ಲಿ ಕನ್ನಡಕ ಖರೀದಿಸಲು ಇದೇ ರೀತಿ ಅಂಗಡಿಗೆ ಭೇಟಿ ನೀಡಿದ್ದರು. ಅದು ಕೂಡಾ ದೊಡ್ಡ ಸುದ್ದಿಯಾಗಿತ್ತು. ಬದುಕಿನ ಸರಳತೆಗಾಗಿ ಪೋಪ್ ಫ್ರಾನ್ಸಿಸ್ ಜನರ ನಡುವೆ ಹೆಚ್ಚು ಜನಪ್ರಿಯರಾಗಿದ್ದಾರೆಂದು ವರದಿ ತಿಳಿಸಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News