×
Ad

ಕೋಡಿ: ಬ್ಯಾರೀಸ್ ಡಿ.ಎಡ್ ಕಾಲೇಜಿನಲ್ಲಿ ಸಮಲೋಚನಾ ಸಭೆ

Update: 2016-12-23 15:53 IST

ಕುಂದಾಪುರ ಡಿ.20: ಕೋಡಿ ಕುಂದಾಪುರ ಬ್ಯಾರೀಸ್ ಡಿ.ಎಡ್ ಕಾಲೇಜು ಹಾಗೂ ಡಯಟ್ ಉಡುಪಿ ಜಂಟಿ ಸಹಯೋಗದಲ್ಲಿ ಕ್ಲಸ್ಟರ್ ಮಟ್ಟದ ಸಮಲೋಚನಾ ಸಭೆ ಇಂದು ನಡೆಯಿತು. 

ಡಯಟ್ ಉಡುಪಿ ಉಪಪ್ರಾಂಶುಪಾಲರಾದ  ಚಂದ್ರಶೇಖರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಜಿ ಮಾಸ್ಟರ್ ಮೆಹಮೂದ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಉದಯ ಗಾಂವ್ಕಕರ್ ಶೈಕ್ಷಣಿಕ ಶಿಫಾರಸುಗಳ ಬಗ್ಗೆ ಮಾಹಿತಿ ನೀಡಿದರು. ಇನ್ನೋರ್ವ ಸಂಪನ್ಮೂಲ ವ್ಯಕ್ತಿ  ಮಹೇಶ್‌ಚಂದ್ರ ಸಮನ್ವಯ ಶಿಕ್ಷಣದ ಕುರಿತು ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಡಯಟ್ ಉಡುಪಿ, ಕೋಕ್ಕರ್ಣೆ ಡಿ.ಎಡ್ ಕಾಲೇಜು, ಬ್ಯಾರೀಸ್ ಡಿ.ಎಡ್ ಕಾಲೇಜಿನ ಎಲ್ಲಾ ಉಪನ್ಯಾಸಕರು ಹಾಗೂ ಪ್ರಾಂಶುಪಾಲರು ಭಾಗವಹಿಸಿದ್ದರು.

ಬ್ಯಾರೀಸ್ ಡಿ.ಎಡ್ ಕಾಲೇಜು ಪ್ರಾಂಶುಪಾಲೆ ಫಿರ್ದೋಸ್  ಸ್ವಾಗತಿಸಿದರು. ಸುಚಿತ್ರಾ ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News