×
Ad

ಈ ವಿಮಾನ ನಿಲ್ದಾಣದಲ್ಲಿ ಮನುಷ್ಯರಿಗೆ ಮಾತ್ರವಲ್ಲ, ಮೊಬೈಲ್ ಗೂ ಟಾಯ್ಲೆಟ್ ಪೇಪರ್ !

Update: 2016-12-23 15:57 IST

ಟೋಕಿಯೊ (ಜಪಾನ್), ಡಿ. 23: ಮುಂದಿನ ಸಲ ಟೋಕಿಯೊದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವಾಗ ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡನ್ನು ಸ್ವೈಪ್ ಮಾಡುವ ಮೊದಲು ಒರೆಸುವುದನ್ನು ಮರೆಯಬೇಡಿ.

ವಿಮಾನ ನಿಲ್ದಾಣದ ಶೌಚಾಲಯಗಳಲ್ಲಿ ಶೌಚ ಕಾಗದಗಳನ್ನು ಪೂರೈಸಲಾಗಿದ್ದು, ನಿಮ್ಮ ಸ್ಮಾರ್ಟ್‌ಫೋನ್‌ಗಳನ್ನು ವೈರಸ್‌ಮುಕ್ತಗೊಳಿಸಲು ನೀವು ಅವುಗಳನ್ನು ಬಳಸಬಹುದು.

ಇದರ ಖರ್ಚು ವೆಚ್ಚಗಳನ್ನು ಜಪಾನ್‌ನ ಬೃಹತ್ ಮೊಬೈಲ್ ಕಂಪೆನಿ ಎನ್‌ಟಿಟಿ ವಹಿಸಿಕೊಂಡಿದೆ. ಕಂಪೆನಿಯ ವೈ-ಫೈ ಜಾಲಗಳು ಹಾಗೂ ಅದರ ಸ್ಮಾರ್ಟ್‌ಫೋನ್ ಟ್ರಾವೆಲ್ ಆ್ಯಪ್‌ನ ವಿವರಗಳೂ ಶೌಚ ಕಾಗದಗಳಲ್ಲಿವೆ.

ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಈ ಸುದ್ದಿಗೆ ತಮಾಷೆಯಿಂದ ಪ್ರತಿಕ್ರಿಯಿಸಿದ್ದಾರೆ.

ವಿಮಾನ ನಿಲ್ದಾಣದ ಏಳು ಶೌಚಾಲಯಗಳಲ್ಲಿ ಟಾಯಿಲೆಟ್ ಪೇಪರ್‌ಗಳನ್ನು ಕೊಡುವ ಯಂತ್ರಗಳನ್ನು ಅಳವಡಿಸಲಾಗಿದೆ ಹಾಗೂ ಇವುಗಳೂ ಮುಂದಿನ ವರ್ಷದ ಮಾರ್ಚ್‌ವರೆಗೆ ಇರುತ್ತವೆ ಎಂದು ಎನ್‌ಟಿಟಿಯನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

‘‘ಶೌಚಾಲಯದ ಸೀಟ್‌ಗೆ ಹೋಲಿಸಿದರೆ, ಸ್ಮಾರ್ಟ್ ಫೋನ್‌ನ ಪರದೆಯಲ್ಲಿ ಐದು ಪಟ್ಟಿಗೂ ಅಧಿಕ ವೈರಸ್‌ಗಳಿರುತ್ತವೆ’’ ಎಂದು ಎನ್‌ಟಿಟಿ ಡೊಕೊಮೊ ತನ್ನ ಅಧಿಕೃತ ಯು ಟ್ಯೂಬ್ ಪುಟದಲ್ಲಿ ಹಾಕಿದ ಸಂದೇಶವೊಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News