×
Ad

ಭಟ್ಕಳ:ವಾಯರ್ ನಿಟ್ಟಿಂಗ ತರಬೇತಿ ಶಿಬಿರ ಉದ್ಘಾಟನೆ

Update: 2016-12-23 16:03 IST

ಭಟ್ಕಳ, ಡಿ.23: ಸಮುದಾಯ ಅಭಿವೃದ್ಧಿ ಯೋಜನೆ ಮುರುಡೇಶ್ವರ  ಆರ್.ಎನ್.ಎಸ್ ಪಾಲಿಟೆಕ್ನಿಕ್ ವತಿಯಿಂದ 3 ತಿಂಗಳ ಉಚಿತ ವಾಯರ್ ನಿಟ್ಟಿಂಗ ತರಬೇತಿಯನ್ನು ಅಮಿತಾಕ್ಷ ಯೋಗ ಭವನದಲ್ಲಿ ಉದ್ಘಾಟನೆಗೊಂಡಿತು.

ಅಮಿತಾಕ್ಷಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಪಾಂಡುರಂಗ ನಾಯಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಮೊದಲು ಒತ್ತಡದಿಂದ ಹೊರಬಂದು ಮಾನಸಿಕವಾಗಿ ಸದೃಢರಾಗಬೇಕಾಗಿದೆ ಹಾಗೂ ಸ್ವಾವಲಂಬಿಯಾಗಿ ಬದುಕು ಸಾಗಿಸುವ ಮೂಲಕ ಸಮಾಜಮುಖಿಯಾಬೇಕೆಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಎಂ.ವಿ.ಹೆಗಡೆ, ಮಹಿಳೆಯರು ಬಿಡುವಿನ ವೇಳೆಯಲ್ಲಿ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಿ ಎಂದು ತಿಳಿಸಿದರು .

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಮುದಾಯ ಅಭಿವೃದ್ಧಿ ಯೋಜನಾಧಿಕಾರಿ ಕೆ.ಮರಿಸ್ವಾಮಿ ಮಾತನಾಡಿ, ಯೋಜನೆಯ ಮೂಲಕ ನೀಡುವ ವೃತ್ತಿ ಕುಶಲ ತರಬೇತಿಗಳು , ನೇರವು ಸೇವೆ , ತಾಂತ್ರಿಕ ಸೇವೆ ಮುಂತಾದ ಸೇವೆಗಳನ್ನು ಕಳೆದ 17 ವರ್ಷಗಳಿಂದ ಗ್ರಾಮೀಣ ಮತ್ತು ನಗರ ಭಾಗದಲ್ಲಿ ನೀಡುವ ಮೂಲಕ ಸರ್ವತೊಮುಖ ಅಭಿವೃಧಿಗೆ ಶ್ರಮಿಸಲಾಗುತ್ತದೆ ಎಂದು ತಿಳಿಸಿದರು. ತರಬೇತಿ ಶಿಕ್ಷಕಿ ಕವಿತಾ ಎಚ್.ಕುಡಗುಂಟಿಕರ ಯೋಗ ತಜ್ಞ ಡಾ.ಗೌತಮ್ ಉಪಸ್ಥಿತರಿದ್ದರು .

ಯೋಗಿತಾ ಯೋಗಿರಾಜ ಶ್ಯಾನಭಾಗ ಪ್ರಾರ್ಥಿಸಿದರು. ರಾಜೇಶ್ರೀ ರಾಜರಾಮ ಶ್ಯಾನಭಾಗ ಸ್ವಾಗತಿಸಿ, ಸಿ.ಡಿ.ಟಿ.ಪಿ ಯೋಜನೆಯ ಪ್ರಕಾಶ ಜೆ.ಸಿ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News