ಭಟ್ಕಳ : ಆರ್.ಎನ್.ಎಸ್ ವಿದ್ಯಾನಿಕೇತನ ಶಾಲೆಯ ವಾರ್ಷಿಕೋತ್ಸವ
ಭಟ್ಕಳ, ಡಿ.23 : ವಿದ್ಯಾರ್ಥಿಗಳಲ್ಲಿನ ಉದಾಸೀನತೆ, ಕ್ರೀಯಾಶೂನ್ಯತೆ ಹಾಗೂ ವಿಫಲತೆ ಅವರಲ್ಲಿನ ಮಾನವೀಯ ಮೌಲ್ಯಗಳ ಕೊರತೆಯಿಂದಾಗಿದೆ. ಆದುದರಿಂದ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಒತ್ತು ನೀಡಬೇಕೆಂದು ಮಾನವ ಶಾಸ್ತ್ರಜ್ಞ ಡಾ.ಸಿ.ಕೆ.ಮಂಜುನಾಥ್ ಹೇಳಿದರು.
ಅವರು ಮುರುಡೇಶ್ವರದ ಆರ್.ಎನ್.ಎಸ್ ವಿದ್ಯಾನಿಕೇತನ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಜನ ಸಾಮಾನ್ಯರ ಅಂತಃಕರಣವನ್ನು ತಟ್ಟಿ ಎಬ್ಬಿಸುವ ರಾಷ್ಟ್ರೀಯ ಮೌಲ್ಯಗಳೊಂದಿಗ ಮಾನವೀಯ ಮೌಲ್ಯಗಳು ವಿದ್ಯಾರ್ಥಿ ಸಮುದಾಯವನ್ನು ಕ್ರೀಯಾಶೀಲರನ್ನಾಗಿ ಮಾಡುತ್ತದೆ ಎಂದ ಅವರು ನೈತಿಕ ಶಿಕ್ಷಣದಿಂದಾಗಿ ಸಕರಾತ್ಮಕ ಚಿಂತನೆಗಳು ಬೆಳದು ಮೃಗೀಯತೆ ಮಾಯವಾಗುತ್ತದ ಎಂದರು.
ಶಿವಮೊಗ್ಗ ಜಿಲ್ಲಾ ನಾಲ್ಕನೆಎ ಹೆಚ್ಚುವರಿ ಮತ್ತು ಅಧೀನ ನ್ಯಾಯಾಲಯದ ಅರ್ಕಾರಿ ಅಭಿಯೋಜಕ ಬಿ ಪ್ರಕಾಶ ಚಂದ್ರ ಶೆಟ್ಟಿ ಮಾತನಾಡಿ, ಆರ್.ಎನ್.ಎಸ್. ಸಮೋಹ ಸಂಸ್ಥೆಯ ಸಾಮಾಜಿಕ, ಧಾರ್ಮಿಕ, ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಪ್ರಾಮಾಣಿಕ ಸೇವ ಸಲ್ಲಿಸುತ್ತಿದೆ ಎಂದು ಶ್ಲಾಘಿಸಿದರು.
ಭಟ್ಕಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ಪಟಗಾರ, ಆರ್.ಎನ್.ಎಸ್ ಸಂಸ್ಥೆಯ ನಿರ್ದೇಶಕ ಎಂ.ವಿ.ಹೆಗಡೆ, ಪ್ರಾಂಶುಪಾಲ ಮಾಧವ್ ಪಿ, ಡಾ.ಸುರಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತಿದ್ದರು.
ಶಿಕ್ಷಕಿ ಫ್ಲೇವಿಯಾ ಫರ್ನಾಂಡೀಸ್ ಸ್ವಾಗತಿಸಿದರು. ಕೋಮಲಾ ಮೊಗೇರ್ ವಂದಿಸಿದರು. ಎ.ವಿ. ಸುಪ್ರಿಯಾ ಕಾರ್ಯಕ್ರಮ ನಿರೂಪಿಸಿದರು.